ಮಹಿಳೆಯರ ಮೇಲೆ ದೌರ್ಜನ್ಯ ನಿಲ್ಲಲಿ

BDM 1101
Published on

ಬಾದಾಮಿ: ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಲವರ್ಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕು ಆಡಳಿತ, ತಾಪಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣೊಂದು ಕಲಿತರೆ ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ. ಹೆಣ್ಣು ಮಕ್ಕಳು ಶಿಕ್ಷಣ ಕೊಡುವುದು ಬಸವಣ್ಣನವರ ಕಾಲದಿಂದ ಆರಂಭವಾಯಿತು. ಅಕ್ಕಮಹಾದೇವಿ ಮೊದಲ ಕವಯಿತ್ರಿ. ಬಸವಣ್ಣನವರ ಕಾಲದಲ್ಲಿ ಬಹಳ ಜನ ಮಹಿಳೆಯರು ವಚನ ಪಠಣ ಮಾಡುತ್ತಿದ್ದರು. ಬ್ರಿಟಿಷರು ಬಂದ ನಂತರ ಮಹಿಳೆಯರಿಗೆ ಶಿಕ್ಷಣ ಪ್ರಾರಂಭವಾಯಿತು. ಮೊದಲ ಮಹಿಳಾ ಶಿಕ್ಷಕಿ ಸಾವಿತ್ತಿಬಾಯಿ ಫುಲೆ. ಮಹಿಳೆಯಗೋಸ್ಕರ ಶಾಲೆ ಪ್ರಾರಂಭಿಸಿ ಶಿಕ್ಷಣ ಕೊಟ್ಟರು. ಹೆಣ್ಣಿಗೆ ಎಷ್ಟೇ ಅವಮಾನ ಮಾಡಿದರೂ ಹಿಡಿದ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಿಲ್ಲಬೇಕು. ಹೆಣ್ಣನ್ನು ನೋಡುವ ದೃಷ್ಟಿ ಬದಲಾವಣೆಯಾಗಬೇಕು. ಎಲ್ಲರೂ ಜಾಗೃತಿಯಾಗಬೇಕು. ತಾರತಮ್ಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು. ಭಾಗ್ಯಲಕ್ಷ್ಮೀ ಲಾನುಭವಿಗಳಿಗೆ ಬಾಂಡ್‌ಗಳನ್ನು ವಿತರಿಸಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ವಿಪ ಸದಸ್ಯ ಆರ್.ಬಿ.ತಿಮ್ಮಾಪುರ, ಜಿಪಂ ಸದಸ್ಯರಾದ ಆಸೆಂಗೆಪ್ಪ ನಕ್ಕರಗುಂದಿ, ಶರಣಬಸಪ್ಪ ಹಂಚಿನಮನಿ, ಶಶಿಕಲಾ ಯಡಹಳ್ಳಿ, ಇಂದ್ರವ್ವ ನಾಯ್ಕರ, ತಾಪಂ ಅಧ್ಯಕ್ಷೆ ರೇಖಾ ತಿರಕಪ್ಪನ್ನವರ, ಮುಖಂಡರಾದ ರಾಜಮಹ್ಮದ್ ಬಾಗವಾನ, ಮಹೇಶ ಹೊಸಗೌಡ್ರ, ಹೊಳಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಎಂ.ಡಿ.ಯಲಿಗಾರ, ತಹಸೀಲ್ದಾರ್ ಸುಹಾಸ ಇಂಗಳೆ, ತಾಪಂ ಇಒ ಡಾ.ಪುನೀತ್ ಹಾಜರಿದ್ದರು.

ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ ಸ್ವಾಗತಿಸಿದರು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಶೋಕ ಬಸಣ್ಣವರ ಪ್ರಸ್ತಾವಿಕವಾಗಿ ಮಾತನಾಡಿದರು. ಬಸಮ್ಮ ನರಸಾಪುರ, ರವಿ ಕಂಗಳ ನಿರೂಪಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net