ಸಂಭ್ರಮದ ಶಿವಯೋಗಮಂದಿರ ಕಾರ್ತಿಕೋತ್ಸವ

BDM 22-1
Published on

ಬಾದಾಮಿ: ಸಂಭ್ರಮದ ಶಿವಯೋಗಮಂದಿರ ಕಾರ್ತಿಕೋತ್ಸವ ತಾಲೂಕಿನ ಸುಕ್ಷೇತ್ರ ಶಿವಯೋಗಮಂದಿರದ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ 110 ನೇ ಕಾರ್ತಿಕೋತ್ಸವ ಹಾಗೂ ಜ್ಞಾನ ದೀಪೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.

ಹಾನಗಲ್ಲ ಕುಮಾರ ಶಿವಯೋಗಿಗಳ ಹಾಗೂ ಸದಾಶಿವ ಮಹಾಸ್ವಾಮೀಜಿಗಳ ಕರ್ತೃ ಗದ್ದುಗೆಯ ಶಿಲಾಮಂಟಪಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ತಿಕೋತ್ಸವದ ನಂತರ ಜ್ಞಾನದೀಪೋತ್ಸವ ಕಾರ್ಯಕ್ರಮದಲ್ಲಿ ಶಿವಯೋಗಮಂದಿರದಲ್ಲಿ ಶಿಕ್ಷಣ ಪಡೆದ ಅನೇಕ ಸ್ವಾಮೀಜಿಗಳು ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು.

ಒಪ್ಪತ್ತೇಶ್ವರ ಶ್ರೀಗಳು, ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ನವಗೃಹ ಹಿರೇಮಠದ ಶಿವಾಚಾರ್ಯ ಶ್ರೀಗಳು, ಶಿವಯೋಗಮಂದಿರದ ವಟುಸಾಧಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗೋನಾಳ, ಶಿರಬಡಗಿ, ನಂದಿಕೇಶ್ವರ, ನೆಲವಿಗಿ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ತಾಲೂಕಿನ ಹೊಸೂರ ಗ್ರಾಮದ ವೇ.ಮಹಾಲಿಂಗಯ್ಯ ಹಿರೇಮಠ ಅವರ ಸವಿನೆನಪಿಗಾಗಿ ಅವರ ಪುತ್ರ ರುದ್ರಯ್ಯ ಹಾಗೂ ವೀರಯ್ಯ ಹಿರೇಮಠ ದಾಸೋಹ, ಮೇಲ್ಮಠದ ಪ್ರಸಾದ ವ್ಯವಸ್ಥೆ ಹಾಗೂ ಭಕ್ತಿ ದಾಸೋಹ ಕೈಗೊಂಡರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net