ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಮಾಜಿ ಸಿಎಂಗೆ ಮನವಿ

BDM NEWS 04-02
Published on

ಬಾದಾಮಿ: ಮಾಜಿ ಸಿಎಂ, ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಗುರುವಾರ ಪಟ್ಟಣದ ತಮ್ಮ ಕಚೇರಿಯಲ್ಲಿ 100ಕ್ಕೂ ಹೆಚ್ಚು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ನೀರು, ವಿದ್ಯುತ್, ಒಳಚರಂಡಿ, ಮ್ಯೂಜಿಯಂ ರಸ್ತೆ, ಹಿಂದು ರುದ್ರಭೂಮಿ ಸೇರಿ ವಿವಿಧ ಮೂಲಸೌಲಭ್ಯ ಒದಗಿಸಲು ಮತ್ತು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿಯವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮನವಿ ಸಲ್ಲಿಸಿದರು.

ತಾಲೂಕಿನ ಸುಳ್ಳ ಗ್ರಾಮದ ಭೀಮಪ್ಪ ತಿರಗನ್ನವರ ಮಾತನಾಡಿ, ಗ್ರಾಮದಲ್ಲಿ 2009ರಲ್ಲಿ ನೆರೆಹಾವಳಿ ಬಂದ ವೇಳೆ ಸ್ಥಳಾಂತರವಾದ ಆಸರೆ ಮನೆಗಳ ಕಾಲನಿಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಒಂದೇ ಒಂದು ನಳ ಇದ್ದು ಪಿಡಿಒ ಅವರಿಗೆ ಎಷ್ಟು ಹೇಳಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಬಿಸಿಎಂ ವಸತಿ ನಿಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ರೇಣುಕಾ ಮುಂದೇಲಿ ಮಾತನಾಡಿ, ಅಧಿಕಾರಿಗಳು ನನ್ನನ್ನು ಕೆಲಸದಿಂದ ತೆಗೆದಿದ್ದು, ಕಳೆದ ಒಂದು ವರ್ಷದ ವೇತನ ಕೊಡಿಸಬೇಕು ಎಂದು ಮನವಿ ಮಾಡಿದರು.

ನೆಲವಿಗಿ ಗ್ರಾಮದ ಬಾಳಪ್ಪ ಗಾರವಾಡ ಮಾತನಾಡಿ, ನೆರೆ ಹಾವಳಿಯಲ್ಲಿ ನಮ್ಮ ಮನೆ ಸಂಪೂರ್ಣ ಮುಳುಗಿ ಹೋಗಿದ್ದು, ನಮಗೆ ಬರಬೇಕಾಗಿದ್ದ ಪರಿಹಾರದ ಮೊತ್ತವನ್ನು ಅಧಿಕಾರಿಗಳು ಬೇರೆಯವರಿಗೆ ಕೊಟ್ಟಿದ್ದಾರೆ. ನಮಗೆ ಮನೆಯೂ ಇಲ್ಲ, ಪರಿಹಾರ ದನವೂ ಇಲ್ಲದಂತಾಗಿದೆ. ಕೂಡಲೇ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಶಾಸಕ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಎಂ.ಬಿ. ಹಂಗರಗಿ, ಇಷ್ಟಲಿಂಗ ಶಿರಸಿ, ಹೊಳೆಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಎಂ.ಡಿ. ಯಲಿಗಾರ, ಬಸವರಾಜ ಬ್ಯಾಹಟ್ಟಿ, ಪಿ.ಆರ್. ಗೌಡರ, ತಾಪಂ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ, ರಾಜಮಹಮ್ಮದ ಬಾಗವಾನ, ಮಧು ಯಡ್ರಾಮಿ, ರೇವಣಸಿದ್ದಪ್ಪ ನೋಟಗಾರ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net