ಗ್ರಾಮಗಳ ಪ್ರಗತಿಗೆ ಸಹಕರಿಸಿ

BDM 121
Published on

ಬಾದಾಮಿ: ಎಸ್‌ಸಿ, ಎಸ್‌ಟಿ ಸಮಾಜ ಬಾಂಧವರು ಇತರ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸಲಹೆ ನೀಡಿದರು.

ಪಟ್ಟಣದ ಅಕ್ಕಮಹಾದೇವಿ ಅನುಭಾವ ಮಂಟಪದ ಕುಮಾರೇಶ್ವರ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಎಸ್‌ಸಿ, ಎಸ್‌ಟಿ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೋಮನಕೊಪ್ಪ ಪೂರ್ಣಾನಂದ ಮಠದ ನೀಲಲೋಹಿತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ತಹಸೀಲ್ದಾರ್ ಭೀಮಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ರೋಣದ, ಲಕ್ಷ್ಮಣ ಮರಡಿತೋಟದ, ಪಿ.ಎಸ್.ಕವಡಿಮಟ್ಟಿ, ಬಸವರಾಜ ಪಾತ್ರೋಟ, ವೈ.ಆರ್.ಪಾಟೀಲ, ಬಸವರಾಜ ತಳವಾರ, ಕನಕಪ್ಪ ಪರಸನ್ನವರ, ಕೋನಪ್ಪ ಕಾಟನ್ನವರ, ಪ್ರಕಾಶ ನಾಯ್ಕರ, ಪಡಿಯಪ್ಪ ಬೆಳ್ಳಿಗುಂಡಿ, ರೇಣುಕಾ ಕೊಳ್ಳನ್ನವರ, ಸಿ.ಬಿ.ಗೌಡರ ಹಾಜರಿದ್ದರು.
ತಾಲೂಕಿನ 210 ಜನ ಎಸ್‌ಸಿ, ಎಸ್‌ಟಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net