ಅಪರಿಚಿತ ವಾಹನ ಡಿಕ್ಕಿ, ಕತ್ತೆಕಿರುಬ ಸಾವು

BDM NEWS 12-1
Published on

ಬಾದಾಮಿ: ತಾಲೂಕಿನ ಕೆರೂರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕತ್ತೆಕಿರುಬ (ಹೈನಾ) ಮೃತಪಟ್ಟಿದೆ.

ವಾಹನ ಮುಖಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದು, ಅಳವಿನ ಅಂಚಿನಲ್ಲಿರುವ ಕತ್ತೆಕಿರುಬ ಪ್ರಾಣಿ ಸ್ಥಳದಲ್ಲೇ ಮೃತಪಟ್ಟಿದೆ. ತಾಲೂಕಿನ ಕೆರೂರ, ಸಿದ್ಧನಕೋಳ, ಸಿದ್ಧೇಶ್ವರ, ಬೇಲೂರ ಮತ್ತಿತರ ಗುಡ್ಡ ಬೆಟ್ಟಗಳಲ್ಲಿ ಕತ್ತೆಕಿರುಬ ಮತ್ತು ತೋಳ, ನರಿಗಳ ಸಂತತಿ ಇದೆ. ಇವುಗಳು ನಿಶಾಚರಿ (ರಾತ್ರಿ ಚಟುವಟಿಕೆಯಿಂದಿರುವ ಪ್ರಾಣಿಗಳು) ಪ್ರಾಣಿಗಳಾಗಿದ್ದರಿಂದ ರಾತ್ರಿ ರಸ್ತೆ ದಾಟುವುದು ಸಾಮಾನ್ಯ. ಆದ್ದರಿಂದ ವಾಹನ ಚಾಲಕರು ಪ್ರಾಣಿಗಳ ಸಂಚಾರವನ್ನು ಗಮನಿಸಿ ಇಂತಹ ವಲಯಗಳಲ್ಲಿ ನಿಧಾನವಾಗಿ ಚಲಿಸಬೇಕು. ಅರಣ್ಯ ಇಲಾಖೆಯವರು ಇಂತಹ ವಲಯಗಳಲ್ಲಿ ಬೋರ್ಡ್‌ಗಳನ್ನು ಹಾಕಬೇಕು ಎಂದು ಇಳಕಲ್ಲನ ಛಾಯಾಗ್ರಾಹಕ ಮತ್ತು ವನ್ಯಜೀವಿ ಪ್ರೇಮಿ ಗಂಗಾಧರ ಯರಗೇರಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net