ಹುಲಿಗೆಮ್ಮನ ಕೊಳ್ಳಕ್ಕೆ ಹರಿದು ಬಂದ ಜನಸಾಗರ

BDM 4-1
Published on

ಬಾದಾಮಿ: ತಾಲೂಕಿನ ನಿಸರ್ಗ ರಮಣೀಯ ತಾಣ ಹುಲಿಗೆಮ್ಮನ ಕೊಳ್ಳಕ್ಕೆ ವೀಕ್ಷಸಲು ಭಾನುವಾರ ಅಪಾರ ಜನಸಾಗರ ಹರಿದು ಬಂದಿತ್ತು.

ರಜಾದಿನದ ಮಜಾ ಅನುಭವಿಸಲು ಸಾರ್ವಜನಿಕರು, ನೌಕರರು, ಯುವಕರು ತಂಡೋಪತಂಡವಾಗಿ ಆಗಮಿಸಿದ್ದರು. ನಿಸರ್ಗದ ಮಡಿಲಲ್ಲಿ ಜುಳು ಜುಳು ಹರಿಯುವ ನೀರಲ್ಲಿ ಮಿಂದೆದ್ದರು. ಜಲಪಾತದ ಆಕರ್ಷಕ ಹಾಗೂ ಸುಂದರ ದೃಶ್ಯ ನೋಡಿ ಕಣ್ತುಂಬಿಕೊಂಡರು. ಜಿಲ್ಲೆ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿದ್ದರು. ಕಳೆದ 15 ದಿನಗಳಿಂದ ಭರಪೂರ ಮಳೆಯಾದ ಕಾರಣ ಮೇಲಿಂದ ಬೀಳು ಹುಲಿಗೆಮ್ಮನಕೊಳ್ಳ ಹೆಚ್ಚು ಕಳೆಗಟ್ಟಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net