ಬಾದಾಮಿ: ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಸೆ.14 ಹಾಗೂ 15 ರಂದು ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಸೆ.14 ರಂದು ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದ ಮೂಲಕ ಆಗಮಿಸುವರು. ನಂತರ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಗೋವನಕೊಪ್ಪಕ್ಕೆ ಆಗಮಿಸಿ ಪ್ರವಾಹದಿಂದ ಹಾನಿಗೀಡಾದ ಹಳೇ ಬ್ರಿಡ್ಜ್ ವೀಕ್ಷಣೆ, ನಂತರ ಚೊಳಚಗುಡ್ಡ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹದಿಂದ ಹಾನಿಗೀಡಾದ ಜಮೀನುಗಳ ಪರಿಶೀಲನೆ ಮಾಡುವರು. ಮಧ್ಯಾಹ್ನ 4 ಗಂಟೆಗೆ ತಾಪಂ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸುವರು. 5 ಗಂಟೆಗೆ ಸಾರ್ವಜನಿಕರ ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ.
ಸೆ.15 ರಂದು ಬೆಳಿಗ್ಗೆ 10.30 ಗಂಟೆಗೆ ಕುಡಿಯುವ ನೀರಿನ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುವರು. 11 ಗಂಟೆಗೆ ಗುಳೇದಗುಡ್ಡ ಕರನಂದಿ ರಂಗಮಂದಿರದಲ್ಲಿ ನಡೆಯುವ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ನಂತರ ಶಕ್ತಿಚಿತ್ರ ಮಂದಿರ ಹತ್ತಿರ ಮಲ್ಟಿಜಿಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.