

ಬಾದಾಮಿ: ಕೋವಿಡ್-19 ವೈರಸ್ ಸೋಂಕಿನಿಂದ ದೇಶದ ಆರ್ಥಿಕತೆ ತತ್ತರಿಸಿದ ಪರಿಣಾಮ ದೇಶ ಹಾಗೂ ದೇಶವಾಸಿಗಳ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಆತ್ಮ ನಿರ್ಭರ ಭಾರತ ಯೋಜನೆ ಅನುಷ್ಠಾನ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ತಿಳಿಸಿದರು.
ಮೋದಿ ಸರ್ಕಾರ ಭಾರತದ ಆರ್ಥಿಕ ಪುನರುತ್ಥಾನಕ್ಕೋಸ್ಕರ ಆತ್ಮ ನಿರ್ಭರ ಭಾರತ ತತ್ವದಡಿ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ನ ವಿವಿಧ ವಲಯಗಳ ಆರ್ಥಿಕತೆ ಹಾಗೂ ನಾಗರಿಕರ ವೈಯಕ್ತಿಕ ಆರ್ಥಿಕ ದೃಢತೆ ಈ ಯೋಜನೆಗಳ ಮೂಲಕ ಸಾಕಾರಗೊಂಡಿರುವುದು ಅಂಕಿ ಅಂಶಗಳ ಮೂಲಕ ತಿಳಿದುಬರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಈ ಯೋಜನೆ ಮೂಲಕ ಸಂಕಲ್ಪ ಮಾಡಿದ್ದು, ಇದನ್ನು ನಮ್ಮ ಲೋಕಸಭಾ ಮತಕ್ಷೇತ್ರದಲ್ಲಿ ಅನುಷ್ಠಾನಗೊಳಿಸುವ ಮೂಲಕ ಕಂಕಣಬದ್ಧರಾಗಿ ಜನತೆಗೆ ನೆರವು ನೀಡಿದ್ದೇವೆ. ಆರ್ಥಿಕತೆ, ಮೂಲಸೌಕರ್ಯ, ನಮ್ಮ ವ್ಯವಸ್ಥೆ, ಭಾರತದ ಡೆಮೋಗ್ರಾಫಿ ಪೂರೈಕೆ ಸರಪಳಿ ಈ ಐದು ಆಧಾರ ಸ್ತಂಭಗಳ ಮೇಲೆ ಸ್ವಯಂ ಅವಲಂಬಿತ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿದೆ ಎಂದ ಅವರು ಹೇಳಿದರು.
ಪಡಿತರ ಉಚಿತ ವಿತರಣೆ, ಉಜ್ವಲ, ಜನಧನ್, ಪಿಎಂ ಕಿಸಾನ್, ನರೇಗಾ ಮತ್ತಿತರ ಯೋಜನೆಗಳಡಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು. ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕಾಧ್ಯಕ್ಷ ಶಿವನಗೌಡ ಸುಂಕದ ಇದ್ದರು.
EndFragment