ರೈತರು ಸರ್ಕಾರಿ ಸೌಲಭ್ಯ ಪಡೆಯಲಿ

Badami, BDCC Bank, Kumaragowda Janali, New Warehouse in Belur, Farmers,
ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಬೇಲೂರ ಇದರ ನೂತನ ಗೋಡೌನ್ ಕಟ್ಟಡ, ಬ್ಯಾಂಕ್ ಉದ್ಘಾಟನೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಕುಮಾರಗೌಡ ಜನಾಲಿ, ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪೂರ, ಸಿದ್ದನಗೌಡ ಪಾಟೀಲ, ಶಾಂತವೀರಯ್ಯ ಹಲಗಲಿಮಠ ಇತರರಿದ್ದರು.
Published on

ಬಾದಾಮಿ: ಬಿಡಿಸಿಸಿ ಬ್ಯಾಂಕ್, ಪಿಕೆಪಿಎಸ್ ಮೂಲಕ ಸಿಗುವ ಹಲವಾರು ಸೌಲಭ್ಯಗಳನ್ನು ರೈತರು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ ಹೇಳಿದರು.

ತಾಲೂಕಿನ ಬೇಲೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಬೇಲೂರ ಇದರ ನೂತನ ಗೋಡೌನ್ ಕಟ್ಟಡ ಮತ್ತು ಬ್ಯಾಂಕ್ ಉದ್ಘಾಟನೆ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೇಲೂರ ಗ್ರಾಮದ ಹಿರಿಯರ ಮನವಿ ಮೇರೆಗೆ ಜಾಲಿಹಾಳ ಸಂಘವನ್ನು ಬೇರ್ಪಡಿಸಿ ಬೇಲೂರ ಗ್ರಾಮದಲ್ಲಿ ಸಂಘ ಮಾಡಲಾಗಿದೆ. ಈಗಾಗಲೇ 2 ಬ್ಯಾಂಕ್‌ಗಳನ್ನು ಪ್ರಾರಂಭಿಸಲಾಗಿದೆ. ಮತ್ತೆ ಆಡಗಲ್ಲ ಮತ್ತು ನೀಲಗುಂದ ಗ್ರಾಮದಲ್ಲಿ ಪ್ರಾರಂಭಿಸಲಾಗುವದು. ಸಹಕಾರಿ ಸಂಘದಲ್ಲಿ ಸಹಕಾರ ಮನೋಭಾವನೆಯಿಂದ ಬೆಳೆದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ವಿವಿಧೋದ್ದೇಶ ಸಹಕಾರಿ ಸಂಘಗಳನ್ನು ಮಾಡಿದರೆ ಇನ್ನಷ್ಟು ರೈತರು ಹಾಗೂ ಕೃಷಿಯೇತರ ಸಾಲ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಅಲ್ಲದೆ ಬೀಜ-ಗೊಬ್ಬರ, ಪೆಟ್ರೋಲ್ ಬಂಕ್ ಸೇರಿ ಅನೇಕ ಅವಕಾಶಗಳಿವೆ ಎಂದರು.

ರಾಜ್ಯ ಎಸ್‌ಎಲ್‌ಡಿಪಿ ಉಪಾಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ಪಿಕಾರ್ಡ್ ಬ್ಯಾಂಕ್, ಪಿಕೆಪಿಎಸ್, ಬಿಡಿಸಿಸಿ ಬ್ಯಾಂಕ್ ಮೂಲಕ ಸರ್ಕಾರ ಶೂನ್ಯ ಬಡ್ಡಿದರ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ರೈತ ಬಾಂಧವರು ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಬೇಕೆಂದು ಸಲಹೆ ನೀಡಿದರು.

ಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಶಾಂತಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಹನುಮಂತ ಮಾವಿನಮರದ, ಶೋಭಾ ಗಾಣಿಗೇರ ಮಾತನಾಡಿದರು. ಬೇಲೂರ ಪಿಕೆಪಿಎಸ್ ಅಧ್ಯಕ್ಷ ಶಾಂತವೀರಯ್ಯ ಹಲಗಲಿಮಠ ಅಧ್ಯಕ್ಷತೆ ವಹಿಸಿದ್ದರು. ಹಾಲಕೇರಿ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಕುಬೇರಗೌಡ ಪಾಟೀಲ, ಶೇಖರಯ್ಯ ಹಿರೇಮಠ, ಬಸವರಾಜ ಟೆಂಗಿನಕಾಯಿ, ಅಂದಾನಗೌಡರ ಹಳ್ಳದ, ಎ.ಕೆ.ಸರಾಫ್, ಮಲ್ಲಪ್ಪ ಮಾಳೆಕೊಪ್ಪ, ಗಿರೀಶ ಗಾಣಿಗೇರ, ಮುತ್ತಣ್ಣ ಪೂಜಾರ, ಗ್ರಾಪಂ ಅಧ್ಯಕ್ಷೆ ನೇತ್ರಾ ಮದಕಟ್ಟಿ, ಬಾಗಲಕೋಟೆ ಸಹಕಾರ ಸಂಘಗಳ ಉಪ ನಿಬಂಧಕ ಮಲ್ಲಿಕಾರ್ಜುನ ಪೂಜಾರ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕ ಎಂ.ಎಚ್.ಲಕ್ಷ್ಮಣ, ಬಾಗಲಕೋಟೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ದಾನಯ್ಯ ಹಿರೇಮಠ, ಸಹಕಾರ ಅಭಿವೃದ್ಧಿ ಅಧಿಕಾರಿ ಆರ್.ವಿ.ಬೂದಿ, ಜಿಲ್ಲಾ ನಬಾರ್ಡ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ರೆಡ್ಡಿ, ಎಸ್.ಎಸ್.ಮಿರ್ಜಿ, ವಿ.ಎಸ್.ಮಲ್ಲಾಪೂರ, ಗುತ್ತಿಗೆದಾರ ಶಶಿಧರ ತೇಲಿ, ಬೇಲೂರ ಪಿಕೆಪಿಎಸ್ ಮುಖ್ಯ ಕಾರ್ಯ ನಿರ್ವಾಹಕ ರಾಮಣ್ಣ ಕುದರಿ, ಕಟ್ಟಡ ಕಾರ್ಮಿಕ ಭೀಮಸಿ ಆಸಂಗಿ ಉಪಸ್ಥಿತರಿದ್ದರು. ವೀರಬದ್ರಪ್ಪ ಸೂಡಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net