17 ರಿಂದ ಬಾದಾಮಿಯಲ್ಲಿ ಶರನ್ನವರಾತ್ರಿ ಆರಂಭ

BDM 14-1
Published on

ಬಾದಾಮಿ: ಸಮೀಪದ ಬನಶಂಕರಿ ದೇವಸ್ಥಾನದಲ್ಲಿ ಅ.17 ರಿಂದ 31ರವರೆಗೆ ಶರನ್ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಅ.17ರಂದು ಅಶ್ವೀಜ ಶುದ್ಧ ಪ್ರತಿಪದಾ ನವರಾತ್ರಿ ಆರಂಭ (ಘಟಸ್ಥಾಪನೆ), 21 ರಂದು ಲಲಿತಾ ಪಂಚಮಿ (ಉಪಾಂಗ ಲಲಿತಾ ವ್ರತಂ), 24 ರಂದು ದುರ್ಗಾಷ್ಟಮಿ (ನವಚಂಡಿ ಹವನ ರಾತ್ರಿ ಆರಂಭ), 25 ರಂದು ಮಹಾನವಮಿ (ಆಯುಧ ಪೂಜೆ ಮತ್ತು ಖಂಡೆಪೂಜೆ), ವಿಜಯದಶಮಿ, ದಸರಾ ಸೀಮೋಲ್ಲಂಘನ (ಬನ್ನಿ ಮೂಡಿಯುವುದು), 31ರಂದು ಶೀಗಿ ಹುಣ್ಣಿಮೆ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರ್ಮನ್ ಎಂ.ಎಸ್. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.17 ರಂದು ಘಟಸ್ಥಾಪನೆ ಮತ್ತು ಸಚ್ಛತಾ ಪ್ರಯುಕ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ದೇವಿಯ ದರ್ಶನ ಹಾಗೂ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಧರ್ಮದರ್ಶನ ಮತ್ತು ವಿಶೇಷ ಸೇವೆಗಳು ಮಧ್ಯಾಹ್ನ 4 ಗಂಟೆ ನಂತರ ಪ್ರಾರಂಭವಾಗುತ್ತವೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ತಿಳಿಸಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net