ವಿವಿಧ ಬೇಡಿಕೆ ಈಡೇರಿಸಿ

BDM 26-1
Published on

ಬಾದಾಮಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಲ್ಲಿನ ಶಿಶು ಅಭಿವೃದ್ಧಿ ಅಧಿಕಾರಿ ಅಣ್ಣಪೂರ್ಣ ಕುಬಕಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಇಲ್ಲಿಯ ಶಿಶು ಅಭಿವೃದ್ಧಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದ ವೇಳೆ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅನುಸೂಯಾ ಗಾಣಿಗೇರ ಮಾತನಾಡಿ, 2020ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಿ, ಅಂಗನವಾಡಿ ನೌಕರರಿಗೆ 21 ಸಾವಿರ ವೇತನ ಹೆಚ್ಚಿಸಿ ಸೇವೆ ಕಾಯಂಗೊಳಿಸಬೇಕು. ಕೇಂದ್ರಗಳಿಂದಲೇ ಶಾಲೆ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವ ಜತೆಗೆ ಎಲ್ಲ ನೌಕರರಿಗೆ ಪಿಂಚಣಿ ಒದಗಿಸುವುದು ಸೇರಿದಂತೆ 16 ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡಿದರು.

ಕೆ.ಎಸ್. ಕಾವಳ್ಳಿ, ಎಸ್.ಡಿ. ಕುಲಕರ್ಣಿ, ಲತಾ ಜೋಶಿ, ಚಂದ್ರಕಲಾ ಇನಾಂದಾರ, ಅಣ್ಣಕ್ಕ ಹಿರೇಮಠ, ಉಷಾ ಕುಲಕರ್ಣಿ, ಜಿ.ಜಿ. ಕೆಂಚನಗೌಡ್ರ ಪಾಟೀಲ, ಸಾವಿತ್ರಿ ಶಿರೂರ, ಕಲಾವತಿ ಆಶಾಧಾರಿ ಸೇರಿ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net