

ಬ್ಯಾಡಗಿ: ತಾಲೂಕು ಮಟ್ಟದ ಕ್ರೀಡಾಂಗಣಗಳು ಅಭಿವೃದ್ಧಿಗೊಂಡಲ್ಲಿ ಬಹುತೇಕ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಕ್ರೀಡಾಸ್ಪರ್ಧೆಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಪಟ್ಟಣದ ಎಸ್.ಜೆ.ಜೆ.ಎಂ. ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ವಾರ್ ಥಾರ್ ಕ್ಲಾಸಿಕ್ 2023 ಅಂತರ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಮಂದಿರ ಹಾಗೂ ಟ್ರಾೃಕ್ ನಿರ್ಮಿಸಲು ಈ ಹಿಂದೆ 1 ಕೋ.ರೂ. ಮಂಜೂರಾಗಿತ್ತು. ಹಿಂದಿನ ಶಾಸಕರು ಒಳಾಂಗಣ ಕ್ರೀಡೆಗೆ ಅನುಕೂಲ ಕಲ್ಪಿಸಲು 3 ಕೋ.ರೂ. ಪೈಕಿ, 1 ಕೋ.ರೂ. ಬಿಡುಗಡೆ ಮಾಡಿಸಿದ್ದರು. ಇನ್ನುಳಿದ 2 ಕೋ.ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ಬ್ಯಾಡಗಿಯಲ್ಲಿ ವಾರ್ ಥಾರ್ ಕ್ಲಾಸಿಕ್ 2023 ಅಂತರ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಿದ್ದು ಶ್ಲಾಘನೀಯ, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸ್ಪರ್ಧೆಯಲ್ಲಿ ಒಟ್ಟು 38 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಪ್ರಥಮ ಸ್ಥಾನ ಬೊಮ್ಮನಹಳ್ಳಿ ರಾಘು ನಾಯಕ (15 ಸಾ.ರೂ. ಟ್ರೋಫಿ), ಹರಿಹರದ ಎ. ಆನಂದ ದ್ವಿತೀಯ (10,000), ದಾವಣಗೆರೆ ಬಸವರಾಜ ಎನ್. ಎಂ. ತೃತಿಯ ಸ್ಥಾನ (5.ಸಾ.ರೂ) ಪಡೆದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸದಸ್ಯರಾದ ಬಸವರಾಜ ಛತ್ರದ, ಸುಭಾಸ ಮಾಳಗಿ, ಮಾಜಿ ಸದಸ್ಯ ಅಬ್ದುಲ್ ಮುನಾಫ್ ಎರೆಶೀಮಿ, ಕರಾಟೆ ತರಬೇತುದಾರ ನಾರಾಯಣ ಪೂಜಾರ, ಸಿ.ಪಿ.ಐ. ಬಸವರಾಜ, ಪಿ.ಎಸ್.ಐ. ಮಂಜುನಾಥ ಕುಪ್ಪೇಲೂರ ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಡಾ.ಎ.ಎಂ. ಸೌದಾಗರ, ರೈತ ಮುಖಂಡ ಗಂಗಣ್ಣ ಎಲಿ, ದಾವಣಗೆರೆ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಸೈಯದ್ ಇನ್ಸಾಲ್ ವ್ಯವಸ್ಥಾಪಕ ಗಿರೀಶ ಇಂಡಿಮಠ, ಬಿ.ಎನ್. ಮಾಸಣಗಿ, ದೀಪಕ ಲಮಾಣಿ, ಥಾರ್ ಫಿಟ್‌ನೆಸ್ ತರಬೇತುದಾರರಾದ ಮುನೀರ್ ಅಹ್ಮದ್, ಮಾರುತಿ ಭಜಂತ್ರಿ, ರವಿ ಗಜೇಂದ್ರಪ್ಪ ಮಾಳಗಿ ಇದ್ದರು.