

ಬ್ಯಾಡಗಿ: ಜಮೀನಿನಲ್ಲಿ ಇಟ್ಟಿದ್ದ 1.35 ಲಕ್ಷ ರೂ. ಮೌಲ್ಯದ 140 ಚೀಲ ಶುಂಠಿಯನ್ನು ಯಾರೋ ಕಳ್ಳತನ ಮಾಡಿರುವ ಘಟನೆ ತಾಲೂಕಿನ ನೆಲ್ಲಿಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ನಿಂಗಪ್ಪ ನೀಲಪ್ಪ ಕಂಬಳಿ (27) ಎಂಬುವರ ಶುಂಠಿ ಕಳ್ಳತನ ಮಾಡಿರುವುದು.
ಇವರು ಜಮೀನಿನಲ್ಲಿ ಬೆಳೆದಿದ್ದ ಶುಂಠಿಯನ್ನು 20 ಕೆ.ಜಿ.ಯ ಒಟ್ಟು 140 ಚೀಲಗಳನ್ನು ಜಮೀನಿನ ಮನೆಯಲ್ಲಿ ಇಟ್ಟಿದ್ದರು. ರಾತ್ರಿ ಸಮಯದಲ್ಲಿ ಯಾರೋ ಕಳ್ಳತನ ಮನೆಯ ಬಾಗಿಲು ಮುರಿದು ಶುಂಠಿ ಚೀಲಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.