ಬಾಡಗ ಸ್ಟ್ರೈಕರ್ಸ್ ತಂಡ ಚಾಂಪಿಯನ್

ಮಾಲ್ದಾರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ  ಬಾಡಗ ಸ್ಟ್ರೈಕರ್ಸ್ ತಂಡ.
ಮಾಲ್ದಾರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಾಡಗ ಸ್ಟ್ರೈಕರ್ಸ್ ತಂಡ.
Published on

ಸಿದ್ದಾಪುರ: ಮಾಲ್ದಾರೆ ಗ್ರಾಮದಲ್ಲಿ ಆಯೋಜಿಸಿದ್ದ 4ನೇ ವರ್ಷದ ಮಾಲ್ದಾರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಬಾಡಗ ಸ್ಟ್ರೈಕರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಾಲ್ದಾರೆ ಸರ್ಕಾರಿ ಶಾಲಾ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಬಾಡಗ ಸ್ಟ್ರೈಕರ್ಸ್ ತಂಡ ಡಿ.ಕೋಚ್ ತಂಡವನ್ನು ಮಣಿಸಿತು.

ತೃತೀಯ ಸ್ಥಾನವನ್ನು ಜೈ ಭೀಮ್ ತಂಡ ಪಡೆದುಕೊಂಡಿತು. ಉತ್ತಮ ಬ್ಯಾಟ್ಸ್‌ಮನ್ ಆಗಿ ಜೈ ಭೀಮ್ ತಂಡದ ಬಿಪಿನ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಡಗ ಸ್ಟ್ರೈಕರ್ಸ್ ತಂಡದ ಅಲೋಕ್, ಫೈನಲ್ ಪಂದ್ಯದ ಪ್ರಶಸ್ತಿಯನ್ನು ಬಾಡಗ ಸ್ಟ್ರೈಕರ್ಸ್ ತಂಡದ ಸಂಶು, ಉತ್ತಮ ಬೌಲರ್ ಪ್ರಶಸ್ತಿಯನ್ನು ಬಾಡಗಸ್ಟ್ರೈಕರ್ಸ್ ತಂಡದ ನೌಷದ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಟೂರ್ನಿಯಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತದೆ. ಜತೆಗೆ ಕ್ರೀಡೆಯಿಂದ ಸೌಹಾರ್ದತೆ ಮೂಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net