ಕಳಪೆ ಬೀಜ ನೀಡಿದ ಕಂಪನಿ ವಿರುದ್ಧ ಕ್ರಮವಹಿಸಿ

snd former protst
ಸಿಂಧನೂರಿನಲ್ಲಿ ತಹಸಿಲ್ ಕಚೇರಿ ಶಿರಸ್ತೇದಾರ್ ವೀಣಾಗೆ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಮನವಿ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ನಾಗರಾಜ ಬಿಂಗಿ ಇತರರಿದ್ದರು.
Published on

ಸಿಂಧನೂರು: ಜಿಲ್ಲೆಯ ರೈತರಿಗೆ ಭತ್ತದ ಕಳಪೆ ಬಿತ್ತನೆ ಬೀಜ ವಿತರಿಸಿದ ನಂದ್ಯಾಲದ ನೀಲಕಂಠೇಶ್ವರ ಸೀಡ್ಸ್ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಬುಧವಾರ ತಹಸಿಲ್ ಕಚೇರಿ ಶಿರಸ್ತೇದಾರ್ ವೀಣಾಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ರೈತರಿಗೆ ಗುಣಮಟ್ಟದ ಬೀಜ ನೀಡುತ್ತಿದ್ದ ಕಂಪನಿ, ಮುಂಗಾರಿನಲ್ಲಿ ವಿತರಿಸಿದ ಭತ್ತದ ಬೀಜ ಕಳಪೆಯಾಗಿದೆ. ಇದರಿಂದ ಬೆಳೆದ ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ರೈತರು ಕೂಡ ಹೆಚ್ಚಿನ ನಷ್ಟ ಹೊಂದಿದ್ದಾರೆ. ಕೆಲವು ಕಡೆ ಭತ್ತದ ಬೆಳೆ ವಿವಿಧ ರೋಗಕ್ಕೆ ತುತ್ತಾಗಿದೆ.

ಮುಂದಿನ ಬೇಸಿಗೆ ಬೆಳೆಯ ಭತ್ತವೂ ಇಲ್ಲ. ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ. ಕೂಡಲೇ ಕಂಪನಿ ವಿರುದ್ಧ ಅಗತ್ಯ ಕ್ರಮಕೈಗೊಂಡು ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವೇ ಸರ್ಕಾರವೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ತಾಲೂಕು ಅಧ್ಯಕ್ಷ ನಾಗರಾಜ ಬಿಂಗಿ, ನಿರುಪಾದೆಪ್ಪ ಅಡ್ಡಿ, ಯಮನಪ್ಪ, ಚಾಂದ್, ನಾಗೇಶರಡ್ಡಿ, ವೆಂಕೋಬ, ಮೋಯಿನುದ್ದೀನ್, ಮಲ್ಲಪ್ಪ, ಭೀಮರಡ್ಡಿ ಕೆ.ಹುಡಾ, ಬಸವರಾಜ, ಹನುಮಂತಪ್ಪ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net