ಶಾಲೆಗೆ ನುಗ್ಗಿ ಪುಂಡರ ಹಾವಳಿ; ಸುಮೊಟೊ ಪ್ರಕರಣ ದಾಖಲು

Pundaru
Published on

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ವಿವೇಕಾನಂದ ಶಾಲಾ ಆವರಣಕ್ಕೆ ನುಗ್ಗಿದ ಪುಂಡರಿಬ್ಬರು ಶಿಕ್ಷಕರೊಂದಿಗೆ ಜಗಳ ತೆಗೆದು, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಿಡ್ಡಿ ಓಣಿ ನಿವಾಸಿ ಅಜಯ ಹಾಗೂ ಕಾತಿರ್ಕ ಎಂಬುವರು ಶಾಲೆಯ ಆವರಣಕ್ಕೆ ನುಗ್ಗಿದ್ದರು. ಶಾಲಾ ಆವರಣದಲ್ಲಿ ದುಶ್ಚಟಗಳನ್ನು ಮಾಡಬೇಡಿ ಎಂದು ಶಿಕ್ಷಕರು ಬುದ್ದಿ ಹೇಳಿದ್ದರು. ಇಷ್ಟಕ್ಕೆ ಆಕ್ರೋಶಗೊಂಡ ಯುವಕರು ಶಿಕ್ಷಕರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಬಳಿಕ ಸೆಕ್ಯುರಿಟಿ ಗಾರ್ಡ್​ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಯುವಕರಿಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಶಾಲೆಯವರು ದೂರು ನೀಡಲು ಹಿಂದೇಟು ಹಾಕಿದ್ದರಿಂದ ಸುಮೊಟೊ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net