ಜನವರಿಗೆ ಹಿಂದುಳಿದ ವರ್ಗಗಳ ಸಮಾವೇಶ

6 smg 8
ಈಡಿಗ ಭವನದಲ್ಲಿ ಹಿಂದುಳಿದ ವರ್ಗದ ಪ್ರಮುಖರ ಸಭೆಯಲ್ಲಿ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಮಾತನಾಡಿದರು. ತೀ.ನ.ಶ್ರೀನಿವಾಸ್, ವಿ.ರಾಜು, ಅಶೋಕ್‌ಕುಮಾರ್, ಪ್ರೊ. ರಾಚಪ್ಪ, ಡಾ. ಸುಂದರೇಶ್, ಕಡ್ತೂರು ದಿನೇಶ್, ಗೀತಾಂಜಲಿ ದತ್ತಾತ್ರೇಯ, ಎನ್.ಹೊನ್ನಪ್ಪ, ವಕೀಲ ರಾಮಚಂದ್ರ, ಆರ್.ಶ್ರೀಧರ್, ಎಸ್ಸಿ ರಾಮಚಂದ್ರ ಇದ್ದರು.
Published on

ಶಿವಮೊಗ್ಗ: ರಾಜ್ಯದ ಹಿಂದುಳಿದ ವರ್ಗಗಳ ಸಮುದಾಯದ ಸಂಘಟನೆ ಮಾಡುತಿದ್ದು ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಹೇಳಿದರು.

ನಗರದ ಈಡಿಗ ಭವನದಲ್ಲಿ ಬುಧವಾರ ಹಿಂದುಳಿದ ವರ್ಗದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಸೆ.೯ರಂದು ಅತಿ ಹಿಂದುಳಿದ ವರ್ಗಗಳ ಸಮಾವೇಶದ ನಿಮಿತ್ತ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ರಾಜ್ಯದ ಎಲ್ಲ ಜಿ¯್ಲೆಯಿಂದಲೂ ಜನರು ಬರಲಿz್ದÁರೆ. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಗತಿಪರ ಚಿಂತಕರೂ ಹಾಗೂ ದಲಿತ ಸಮುದಾಯದ e್ಞÁನಪ್ರಕಾಶ್ ಸ್ವಾಮೀಜಿ ಬೆಂಗಳೂರಿನ ಪೂರ್ವಭಾವಿ ಸಮಾವೇಶ ಉದ್ಘಾಟಿಸುವರು. ಎಲ್ಲ ಪಕ್ಷದ ಅತಿಹಿಂದುಳಿದ ಜಾತಿಯ ಜನರು ಈ ಸಭೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅತಿಹಿಂದುಳಿದ ಸಮುದಾಯದವರು ಬೆಂಬಲಿಸಿ ಗೆಲ್ಲಿಸಿದ್ದರಿಂದ ಸರ್ಕಾರ ಅಽಕಾರಕ್ಕೆ ಬಂದಿದೆ. ಈಗ ಅಽಕಾರ ಕೇಳುವ ಹಕ್ಕು ನಮಗಿದೆ. ಎಲ್ಲ ಸಮುದಾಯದವರಿಗೂ ಅಽಕಾರ ಹಂಚಿಕೆಯಾಗಬೇಕು. ಹಿಂದುಳಿದ ವರ್ಗ ಎಂದರೆ ಕುರುಬರು, ಈಡಿಗರು ಮಾತ್ರ ಅಲ್ಲ ಉಳಿದ ಚಿಕ್ಕ ಸಮುದಾಯಗಳನ್ನೂ ಜತೆಯಲ್ಲಿ ಕೊಂಡೊಯ್ಯಬೇಕು. ರಾಜ್ಯದಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವವರು ಹಿಂದುಳಿದ ಹಾಗೂ ದಲಿತ ಸಮುದಾಯದವರೇ ಹೆಚ್ಚಿz್ದÁರೆ. ಅವರಿಗೆ ಹಕ್ಕು ಪತ್ರ ಕೊಡಬೇಕಿದೆ. ಸರ್ಕಾರಿ ಸೌಲಭ್ಯಗಳು ಅತೀ ಕಡಿಮೆ ಜನಸಂಖ್ಯೆಯಿರುವ ಜನರಿಗೆ ತಲುಪಬೇಕು. ನಮ್ಮ ಮೀಸಲಾತಿಯನ್ನೂ ಕಿತ್ತುಕೊಳ್ಳುವ ಹುನ್ನಾರಗಳು ನಡೆಯುತ್ತಿವೆ. ಈ ಎಲ್ಲದರ ವಿರುದ್ಧ ನಾವು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಇದೊಂದು ಆಂದೋಲನವಾಗಬೇಕು. ನಿರಂತರ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ನಾವು ಪಡೆಯಬೇಕಿದೆ. ಮಲೆನಾಡಿನ ಹಿಂದುಳಿದ ವರ್ಗಗಳ ಸಮುದಾಯ ಈ ಸಮಾವೇಶಕ್ಕೆ ಬೆಂಬಲಿಸಬೇಕೆAದು ಮನವಿ ಮಾಡಿದರು.
ಮಲೆನಾಡು ಪ್ರಾಂತ ರೈತ ಸಂಘದ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಅಽಕಾರದ ಬೆನ್ನು ಹತ್ತದೆ ರಾಜಕೀಯವನ್ನು ಒಂದು ಸಾಮಾಜಿಕ ಹೋರಾಟದಂತೆ ಪರಿಗಣಿಸಿ ಶೋಷಿತರ ಪರವಾದ ಬದ್ಧತೆ ಇರುವ ಹರಿಪ್ರಸಾದ್ ನೇತೃತ್ವದ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಮಲೆನಾಡಿನಲ್ಲಿರುವ ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರು ದೀವರು ಸೇರಿದಂತೆ ಹಿಂದುಳಿದ ಮತ್ತು ದಲಿತ ವರ್ಗದವರೇ ಹೆಚ್ಚಿz್ದÁರೆ. ಸರ್ಕಾರಗಳು ಪ್ರತಿ ಚುನಾವಣೆಯಲ್ಲಿ ಈ ಸಮುದಾಯಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಅಽಕಾರಕ್ಕೆ ಬಂದ ಮೇಲೆ ಮರೆಯುತ್ತಾರೆ. ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬರುವ ಮುನ್ನ ಭರವಸೆ ನೀಡದಂತೆ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ನಾವೆಲ್ಲರೂ ಸೇರಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಶಿವಮೊಗ್ಗ ಜಿ¯್ಲÁ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು, ಅಶೋಕ್‌ಕುಮಾರ್, ಪ್ರೊ. ರಾಚಪ್ಪ, ಪ್ರಮುಖರಾದ ಡಾ. ಸುಂದರೇಶ್, ಕಡ್ತೂರು ದಿನೇಶ್, ಶಿವಮೊಗ್ಗ ಜಿ¯್ಲÁ ಬ್ರಹ್ಮಶ್ರೀ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಎನ್.ಹೊನ್ನಪ್ಪ, ವಕೀಲ ರಾಮಚಂದ್ರ, ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್, ಎಸ್ಸಿ ರಾಮಚಂದ್ರ, ಸುಮತಿ ಪೂಜಾರ್, ಶಿವಾನಂದ, ಉದಯï‌ಕುಮಾರ್, ಕಾಗೋಡು ರಾಮಪ್ಪ, ಡಿಕೆಶಿ ಅಭಿಮಾನಿಗಳ ಸಂಘದ ಆರ್.ಮೋಹನ್ ಸೇರಿ ಹಲವರು ಭಾಗವಹಿಸಿದ್ದರು.

ಹಿಂದುಳಿದ ವರ್ಗದ ಕೆಲವರಿಗೆ ಮಾತ್ರ ಅಽಕಾರ ಸಿಗುತ್ತಿದೆ. ಆ ಅಽಕಾರ ಅತೀ ಹಿಂದುಳಿದ ವರ್ಗದವರಿಗೂ ಸಿಗಬೇಕೆಂಬ ಉದ್ದೇಶದಿಂದ ಸಂಘಟನೆ ಮಾಡಲಾಗುತ್ತಿದೆ. ಆಯಾ ಸಮುದಾಯದ ಸ್ವಾಮೀಜಿಗಳು ಮಾಡುತ್ತಿರುವ ಸಮಾವೇಶ ಮತ್ತು ಸಂಘಟನೆಗೆ ನಾನು ಬೆಂಬಲ ನೀಡುತ್ತಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಯಾವುದೇ ಅಽಕಾರ ಸಿಗಲಿಲ್ಲ ಎಂದು ಮಾಡುತ್ತಿಲ್ಲ. ಮಂತ್ರಿಗಿರಿಗಾಗಿ ನಾನು ಲಾಬಿ ಮಾಡುವವನೂ ಅಲ್ಲ. ಯಾವುದೇ ಮಂತ್ರಿ ಪದವಿ ಕೊಟ್ಟರೂ ಸ್ವೀಕರಿಸಲಾರೆ.|ಬಿ.ಕೆ.ಹರಿಪ್ರಸಾದ್ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net