ಕಾಮಗಾರಿಯಲ್ಲಿ ಮೀಸಲಾತಿ ಶ್ಲಾಘನೀಯ: ಗುತ್ತಿಗೆದಾರರ ಸಂಘದ ಖಜಾಂಚಿ ಎಂ.ಬಿ.ಶಿವಣ್ಣ ಹೇಳಿಕೆ

Backward Classes Contractors Association Press Conference Mandya
Published on

ಮಂಡ್ಯ: ರಾಜ್ಯದ ಸಿವಿಲ್ ಕಾಮಗಾರಿಗಳ ಪೈಕಿ ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ 2(ಎ) ಗೆ ಒಂದು ಕೋಟಿ ರೂ ವರೆಗಿನ ಕಾಮಗಾರಿಗಳ ಮೀಸಲಾತಿಯನ್ನು ನೀಡಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಹಿಂದುಗಳಿದ ವರ್ಗಗಳ ಗುತ್ತಿಗೆದಾರರ ಸಂಘದ ಖಜಾಂಚಿ ಎಂ.ಬಿ.ಶಿವಣ್ಣ ತಿಳಿಸಿದರು.

ಹಿಂದುಳಿದ ವರ್ಗಕ್ಕೆ ಮೀಸಲಾತಿ ದೊರಕಿಸಲು ಸಹಕಾರ ನೀಡಿದ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ವಂದನೆ ಸಲ್ಲಿಸುತ್ತೇವೆ. ಎಲ್ಲ ಇಲಾಖೆಗಳ ಟೆಂಡರ್ ಹಾಗೂ ಕಾಮಗಾರಿ ಪೈಕಿ ಹಿಂದುಳಿದ ವರ್ಗಗಳಿಗೆ ಶೇ.19ರಷ್ಟು ಮೀಸಲಾತಿ ನೀಡಿದ್ದು, ಪ್ರವರ್ಗ 1ಕ್ಕೆ ಶೇ.4 ರಷ್ಟು ಮತ್ತು ಪ್ರವರ್ಗ 2(ಎ) ಶೇ.15 ರಷ್ಟು ಮೀಸಲಾತಿ ವರ್ಗೀಕರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಭರತೇಶ್, ಯೋಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net