ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ಸೌಲಭ್ಯ

13-msk-1
ಮಹಾಂತೇಶ ಬ್ಯಾಳಿ
Published on

ಮಸ್ಕಿ: ಸಂವಿಧಾನದ 371ಜೆ ಕಲಂ ಸೌಲಭ್ಯ ರದ್ದತಿ ಕೋರಿ ಮುಖ್ಯಮಂತ್ರಿಗೆ ಸಚಿವ ಎಚ್.ಕೆ.ಪಾಟೀಲ ಬರೆದಿರುವುದು ಸರಿಯಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ ಬ್ಯಾಳಿ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಭೌಗೋಳಿಕ, ಔದ್ಯೋಗಿಕ, ಹಿಂದುಳಿದಿರುವ ಪ್ರದೇಶದ ಅಭಿವೃದ್ಧಿಗಾಗಿ ಕಲಂ 371ಜೆ ಜಾರಿಗೊಳಿಸಲಾಗಿದೆ. ಆದರೆ, ಸಚಿವ ಎಚ್.ಕೆ.ಪಾಟೀಲ್ ಕಲ್ಯಾಣ ಕಾರ್ನಾಟಕೇತರ 24 ಜಿಲ್ಲೆಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂಬ ನೆಪ ಮುಂದಿಟ್ಟು ಮೀಸಲಾತಿ ಸೌಲಭ್ಯ ತಡೆಯುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಖಂಡನೀಯ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net