

ಧಾರವಾಡ: ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ 2023-24ನೇ ಸಾಲಿನ ಹಿಂಗಾರು ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯಕ್ಕೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಸಪೂರಿ ಬುಧವಾರ ಚಾಲನೆ ನೀಡಿದರು.
ಕೃಷಿ ಅಧಿಕಾರಿ ಮಹಾದೇವ ಸರಶೆಟ್ಟಿ ಮಾತನಾಡಿ, ರೈತರು ಶಾಂತಿಯುತವಾಗಿ ಬಿತ್ತನೆ ಬೀಜ ಪಡೆಯಬೇಕು. ಕಡಲೆ, ಜೋಳ ಮತ್ತು ಕುಸುಬೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ಎಫ್‌ಐಡಿ ಅಥವಾ ಆಧಾರ ಕಾರ್ಡ್ ಝರಾಕ್ಸ್ ಪ್ರತಿ ತಂದು ಬೀಜವನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ ಮಾರ್ಗದರ್ಶನದಲ್ಲಿ ಬೀಜ ವಿತರಣೆ ಪ್ರಾರಂಭಿಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ ತಳಗೇರಿ, ಮಲ್ಲಪ್ಪ ಈಸರಣ್ಣವರ, ಬಾಬು ಗೋಡಸೆ, ಸೋಮಶೇಖರ ಉಡಕೇರಿ, ಕರೆಪ್ಪ ಭೀಮಣ್ಣವರ, ವಿರುಪಾಕ್ಷಪ್ಪ ಈಸರಣ್ಣವರ, ಪಾಲಿಕೆ ಸದಸ್ಯ ರಾಜು ಕಮತಿ, ಕೃಷಿ ವಿಜ್ಞಾನಿ ಡಾ. ಗೀತಾ ತಮಗಾಳೆ, ಕೃಷಿ ಅಧಿಕಾರಿ ಡಾ. ಲಕ್ಷ್ಮಣ ಕುಕನೂರ, ರೈತ ಸಂಪರ್ಕ ಕೇಂದ್ರ ಸಿಬ್ಬಂದಿ, ಇತರರು ಇದ್ದರು.