ಕರ್ತವ್ಯಲೋಪ ಹಿನ್ನೆಲೆ: ಉಪ ಆರೋಗ್ಯಾಧಿಕಾರಿ ಡಾ.ಪಿ.ಕಲ್ಪನಾ ಸಸ್ಪೆಂಡ್​

bbmp office
Published on

ಬೆಂಗಳೂರು: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ದಕ್ಷಿಣ ವಲಯದ ಉಪ ಆರೋಗ್ಯಾಧಿಕಾರಿ ಡಾ.ಪಿ. ಕಲ್ಪನಾ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಪಾಲಿಕೆ ಆದೇಶ ಹೊರಡಿಸಿದೆ.

ಉಪ ಆರೋಗ್ಯಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಆರೋಗ್ಯಾಧಿಕಾರಿ(ದಕ್ಷಿಣ) ಹುದ್ದೆಯ ಹೊಣೆಗಾರಿಕೆ ನೋಡಿಕೊಳ್ಳಲು ನಿಯೋಜಿಸಲಾಗಿತ್ತು. ಊಟ ವ್ಯವಸ್ಥೆ ನೀಡಿರುವುದಕ್ಕೆ ಹಾಗೂ ಬಳಕೆಯಾಗಿರುವ ಸಂಬಂಧ, ಮೆ|| ಚ್​ಚಿಫ್​​​ಟಾಕ್​ ಫುಡ್​ ಆಂಡ್​ ಹಾಸ್ಪಿಟಾಲಿಟಿ ಸರ್ವಿಸ್​ ಪ್ರೈ.ಲಿ. ಬಾಕಿ ಮೊತ್ತವಾದ 2,27,33,474 ರೂ.ಪಾವತಿಸುವಂತೆ ಕಲ್ಪನಾಗೆ ಬಿಲ್​ ಸಲ್ಲಿಸಿದ್ದರು.

ಆದರೆ, ಇದನ್ನು ಸಮರ್ಪಕವಾಗಿ ಪರಿಶೀಲಿಸದ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಕಲ್ಪನಾ, 2,27,33,474 ರೂ. ಬದಲಾಗಿ 9,72,21,787 ರೂ.ಪಾವತಿಸಿದ್ದರು. ಒಟ್ಟು 7 ಕೋಟಿ ರೂ.ಮೊತ್ತವನ್ನು ಅಧಿಕವಾಗಿ ಪಾವತಿಸಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ವೈದ್ಯೆಯನ್ನು ಸಸ್ಪೆಂಡ್​ ಮಾಡಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net