ಗುರುವಿನ ಮಾತಿಗೆ ಬೆಲೆ ಕೊಟ್ಟು ಕಣದಿಂದ ಹಿಂದಕ್ಕೆ

New Dinagaleshwar swami New
Published on

ಹುಬ್ಬಳ್ಳಿ : ಗುರುಗಳಾದ ಶಿರಹಟ್ಟಿ ಸಿದ್ಧರಾಮ ಸ್ವಾಮೀಜಿ ಅವರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ಮಾತ್ರ ಹಿಂಪಡೆದಿದ್ದೇನೆ. ಆದರೆ, ಧರ್ಮಯುದ್ಧ ಮುಂದುವರಿಯಲಿದೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನೀಡಿದ್ದ ನಾಮಪತ್ರ ಹಿಂಪಡೆದ ನಂತರ ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಬಿಜೆಪಿ ಹಾಗೂ ಕಾಂಗ್ರೆಸ್​ನವರು ಇಬ್ಬರೂ ಸಂರ್ಪಸಿದ್ದಾರೆ. ಎರಡೂ ಪಕ್ಷದವರೂ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಒತ್ತಡ ಹಾಕಿದ್ದರು. ಅವರಿಗೆ ಸರಿಯಾದ ಉತ್ತರವನ್ನೂ ನೀಡಿದ್ದೆ. ಆದರೆ, ನಾನು ಚುನಾವಣೆ ಕಣದಿಂದ ಹಿಂದೆ ಸರಿದಿದ್ದು ನನ್ನು ಗುರುವಿನ ವಾಣಿಗೆ ಬೆಲೆ ಕೊಟ್ಟು ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಪೇಮೆಂಟ್ ಆಗಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಯತ್ನಾಳ ಮಾತಿಗೆ ಅವರ ಪಕ್ಷದಲ್ಲಿಯೇ ಬೆಲೆ ಇಲ್ಲ. ನಾನು ಹೇಗೆ ಹಾಗೂ ಯತ್ನಾಳ ಹೇಗೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅವರೊಬ್ಬ ಬ್ರೖೆನ್​ಲೆಸ್ ಬಾಡಿ ಇದ್ದಂತೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net