

ಗಂಗಾವತಿ: ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಆರೈಕೆಗೆ ಪೂರಕ ವಾತಾವರಣ ನಿರ್ಮಿಸಬೇಕಿದ್ದು, ಕೇಂದ್ರಕ್ಕೆ ಬರುವ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವಂತೆ ತಾಪಂ ಇಒ ಲಕ್ಷ್ಮೀದೇವಿ ಹೇಳಿದರು.
ತಾಪಂ ಮಂಥನ ಸಭಾಂಗಣದಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಶಿಶುಪಾಲನಾ ಕೇಂದ್ರಗಳ ಮಹಿಳಾ ಕೇರ್ ಟೇಕರ್ಸ್‌ಗಳಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರಗಳು ಆ.15ರಿಂದ ಅಧಿಕೃತವಾಗಿ ಆರಂಭವಾಗಲಿವೆ. ಕೇಂದ್ರಗಳಿಗೆ 3 ತಿಂಗಳಿಗೆ ಇಬ್ಬರಂತೆ ವರ್ಷಕ್ಕೆ 8 ಜನ ಕೇರ್ ಟೇಕರ್ಸ್ ನಿಯೋಜಿಸಲಾಗುವುದು. ಕೇಂದ್ರಕ್ಕೆ ಬರುವ ಮಕ್ಕಳನ್ನು ಚೆನ್ನಾಗಿ ಆರೈಕೆ ಮಾಡಬೇಕಿದ್ದು, ಮಗುವಿಗೆ ಮನೆಯ ವಾತಾವರಣ ನಿರ್ಮಿಸಬೇಕು. ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದಂತೆ ಕರ್ತವ್ಯ ನಿರ್ವಹಿಸಬೇಕಿದ್ದು, ನಿರ್ಲಕ್ಷಿಸದಂತೆ ಸಲಹೆ ನೀಡಿದರು.
ಕೇಂದ್ರಗಳ ನಿರ್ವಹಣೆ, ಕರ್ತವ್ಯ ಮತ್ತು ವ್ಯವಸ್ಥೆ ಕುರಿತು ಮಹಿಳಾ ಮತ್ತು ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಸುಕನ್ಯಾ ಮತ್ತು ವಿದ್ಯಾವತಿ ಮಾಹಿತಿ ನೀಡಿದರು. ನರೇಗಾ ವಿಷಯ ನಿರ್ವಾಹಕ ಶಿವಮೂರ್ತೆಯ್ಯ ಕಂಪಾಪುರಮಠ, ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಎಂಐಎಸ್ ಸಂಯೋಕ ನಾಗರಾಜ ಗಂಗನಾಳ, ಮೂರು ತಾಲೂಕಿನ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಕೆ.ಶಿವಕುಮಾರ್, ಸೋಮನಾಥ ನಾಯಕ ಇತರರಿದ್ದರು.