

ಮಂಡ್ಯ: ಹಂಪ್ನಲ್ಲಿ ಆದ ಜಂಪ್ಗೆ ಬೈಕ್ನಲ್ಲಿದ್ದ ತಾಯಿಯ ಕೈತಪ್ಪಿ ಕೆಳಗೆ ಬಿದ್ದ ಒಂದು ವರ್ಷದ ಮಗು ಮೃತಪಟ್ಟಿದೆ. ಚಲಿಸುತ್ತಿರುವ ಬೈಕ್ನಿಂದ ಕೆಳಕ್ಕೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡ ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮಗುವಿನೊಂದಿಗೆ ಮದುವೆಗೆ ತೆರಳಿದ್ದು, ಸಮಾರಂಭ ಮುಗಿಸಿಕೊಂಡು ಮರಳುತ್ತಿದ್ದಾಗ ಹಂಪ್ನಲ್ಲಿ ಬೈಕ್ ಜಂಪ್ ಆಗಿದೆ. ಆಗ ತಾಯಿ ಆಯತಪ್ಪಿದ್ದರಿಂದ ಕೈಯಲ್ಲಿದ್ದ ಮಗು ಕೆಳಕ್ಕೆ ಬಿದ್ದಿದೆ.
ಮಗು ಸಾವಿನಿಂದ ತಂದೆ-ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಕುಟುಂಬ ಆಘಾತಕ್ಕೊಳಗಾಗಿ ತೀವ್ರ ಶೋಕದಲ್ಲಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.