ಪಾತ್ರೆಯೊಳಗೆ ಸಿಲುಕಿಕೊಂಡ ಮಗುವಿನ ತಲೆ: ಪಾತ್ರೆ ತೆಗೆಯಲು ಅಗ್ನಿಶಾಮಕ ದಳ ಕಚೇರಿಗೆ ಹೋಗಬೇಕಾಯ್ತು

11 Month baby indicative image
Published on

ಕಾಸರಗೋಡು: ಆಟವಾಡುತ್ತಿದ್ದ ಸಂದರ್ಭ ಸ್ಟೀಲ್ ಪಾತ್ರೆಯೊಳಗೆ ಮಗುವಿನ ತಲೆ ಸಿಲುಕಿಕೊಂಡು ಅದನ್ನು ತೆಗೆಯಲು ಒದ್ದಾಡಿದ ಘಟನೆ ಕಾಞಂಗಾಡುನಲ್ಲಿ ವರದಿಯಾಗಿದೆ.

ಕಾಞಂಗಾಡು ತೈಕಡಪ್ಪುರ ನಿವಾಸಿ ನಫೀಸಾ ಎಂಬುವರ ಒಂದುವರೆ ವರ್ಷದ ಪುತ್ರ ಸೆಯೀಂಮಲಿಕ್ ಆಟವಾಡುತ್ತಾ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿ ಅಲ್ಲೆ ಸಿಲುಕಿಕೊಂಡಿತ್ತು.

ಮನೆಯವರು ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಾಗದಿದ್ದಾಗ ಪಿಂಕ್ ಪೊಲೀಸರು ನೆರವಿಗೆ ಬಂದರು. ಪೊಲೀಸರು ಮತ್ತು ಮನೆಯವರು ಸೇರಿಕೊಂಡು ಮಗುವನ್ನು ಅಗ್ನಿಶಾಮಕ ದಳ ಕಚೇರಿಗೆ ಕೊಂಡೊಯ್ದು ಯಂತ್ರದ ಸಹಾಯದಿಂದ ಪಾತ್ರೆಯನ್ನು ತುಂಡರಿಸಿ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net