ರೈಲ್ವೆ ಬೋಗಿಯಲ್ಲಿ ಹೆಣ್ಣು ಮಗು ಪತ್ತೆ

29 Dwd 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಾಸ್ಕೋ- ಹೌರಾ ಎಕ್ಸ್ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಒಂದೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಹೌರಾದಿಂದ ವಾಸ್ಕೋ ಹೊರಟಿದ್ದ ರೈಲು ಜ. 27ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡ ನಿಲ್ದಾಣದಲ್ಲಿ ನಿಂತಿತ್ತು. ಬೋಗಿಯಲ್ಲಿ ಹೆಣ್ಣು ಮಗುವನ್ನು ಪಾಲಕರು ಬಿಟ್ಟು ಹೋಗಿದ್ದರು. ಶಬಾನಾ ಪಾಪಣ್ಣ ಎಂಬುವರು ಮಗುವನ್ನು ಎತ್ತಿಕೊಂಡು ನಿಲ್ದಾಣದಲ್ಲಿ ಇಳಿದಿದ್ದಾರೆ. ನಿಲ್ದಾಣದ ವೇದಿಕೆಯಲ್ಲಿ ಕುಳಿತು 2- 3 ವಿಚಾರಿಸಿದರೂ ಪಾಲಕರ ಪತ್ತೆಯಾಗಿಲ್ಲ. ನಂತರ ಮಗುವನ್ನು ವಿದ್ಯಾಗಿರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ಮಗುವನ್ನು ಹುಬ್ಬಳ್ಳಿಯ ಘಂಟಿಕೇರಿಯ ಅಮೂಲ್ಯ ಶಿಶುಗೃಹಕ್ಕೆ ಹಸ್ತಾಂತರಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net