ಹುಲಿ ದಾಳಿಗೆ ಮರಿ ಆನೆ ಬಲಿ

IMG-20241005-WA0132
Published on

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿ ಆನೆ ಸಾವಿಗೀಡಾಗಿದೆ. ಕುಂದಕೆರೆ ವಲಯಾರಣ್ಯಾಧಿಕಾರಿ ಕಚೇರಿಯ ಸಮೀಪ ಮರಿ ಆನೆಯ ಮೃತದೇಹ ಪತ್ತೆಯಾಗಿದೆ. ಶನಿವಾರ ಬೆಳಗ್ಗೆ ಗಸ್ತು ನಡೆಸುತ್ತಿದ್ದ ಸಿಬ್ಬಂದಿ ಮರಿ ಆನೆಯ ಮೃತದೇಹದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ತೆರಳಿದ ಆರ್‌ಎಫ್‌ಒ ಮಲ್ಲೇಶ್ ಹಾಗೂ ಸಿಬ್ಬಂದಿ ಕಳೇಬರವನ್ನು ಪರಿಶೀಲಿಸಿ ನಂತರ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಮೂರು ತಿಂಗಳ ಹೆಣ್ಣು ಆನೆ ಮರಿಯಾಗಿದೆ ಎಂದು ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂಮಿರ್ಜಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net