ಮನೆಗೆ ಬಂದಿದ್ದ ಜಿಂಕೆ ಮರಿ ರಕ್ಷಣೆ

02
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮನೆಯೊಳಗೆ ಬಂದಿದ್ದ ಜಿಂಕೆಮರಿ.
Published on

ಗುಂಡ್ಲುಪೇಟೆ: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ತಾಲೂಕಿನ ತೆರಕಣಾಂಬಿ ಗ್ರಾಮದ ಮನೆಯೊಳಗೆ ನುಗ್ಗಿದ ಜಿಂಕೆಮರಿಯನ್ನು ಅರಣ್ಯ ಇಲಾಖೆ ಸುರಕ್ಷಿತವಾಗಿ ವಶಕ್ಕೆ ಪಡೆದು ಕಾಡಿಗೆ ಬಿಟ್ಟಿದೆ.

ಬುಧವಾರ ಮಧ್ಯಾಹ್ನ ದಾರಿ ತಪ್ಪಿ ಗ್ರಾಮಕ್ಕೆ ಬಂದಿದೆ. ಈ ವೇಳೆ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದ ಕಾರಣ ಜಿಂಕೆಮರಿ ಸಂಕಲ್ಪ ಪ್ಲೇ ಹೋಂ ಒಳಗೆ ನುಗ್ಗಿದೆ. ಅಲ್ಲಿನ ಶಿಕ್ಷಕಿ ಕೂಡಲೇ ಬಾಗಿಲು ಮುಚ್ಚಿ ನಾಯಿಗಳಿಂದ ಪಾರು ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಬಫರ್ ಅರಣ್ಯ ವಲಯದ ಸಿಬ್ಬಂದಿ ಜಿಂಕೆಮರಿಯನ್ನು ವಶಕ್ಕೆ ಪಡೆದು ಸೆಕ್ಷನ್ 4ಗೆ ಸೇರಿದ ಗುಡ್ಡಕ್ಕೆ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net