

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಐದು ವರ್ಷದ ಮಗು, ಹೆಚ್.ಎಸ್. ಜಿಷ್ಣುವಿನ ತಲೆಯ ಮೇಲೆ ದೇಗುಲದ ಗೇಟ್ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಜಿಷ್ಣು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ.
ನಿನ್ನೆ ಕಾರ್ತಿಕ ಸೋಮವಾರವಾದ ಹಿನ್ನೆಲೆಯ ಕುಟುಂಬದೊಂದಿಗೆ ಗ್ರಾಮದ ಚೆನ್ನಕೇಶವ ದೇಗುಲಕ್ಕೆ ಹೋಗಿತ್ತು ಮಗು. ಈ ವೇಳೆ ದೇಗುಲದ ಗೇಟ್ ಜಿಷ್ಣು ತಲೆ ಮೇಲೆ ಬಿದ್ದು ತೀವ್ರ ಗಾಯವಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಮಗು ಇಂದು ಸಾವನ್ನಪ್ಪಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನ ಕೂಡಲೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು.
ಗೇಟು ಮುರಿದು ಸಾಕಷ್ಟು ದಿನಗಳಾದರೂ ಕೂಡ ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರಿದ ಆರೋಪ ಮಾಡಿರುವ ಜಿಷ್ಣು ಪೋಷಕರು ಹಾಗೂ ಗ್ರಾಮಸ್ಥರು, ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ದೂರಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಪೊಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.