

ಬಾಗಲಕೋಟೆ: ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಬಾಲ ಇರುವ ಹಾಗೂ ಇಬ್ಬರು ಮಕ್ಕಳು ಅಂಟಿಕೊಂಡಿರುವ ಹಾಗೂ ಒಟ್ಟಿಗೆ ಮೂರಿಂದ ನಾಲ್ಕು ಮಕ್ಕಳು ಪೊಟ್ಟಿಗೆ ಜನಿಸಿರುವ ಎಷ್ಟೋ ಘಟನೆಗಳ ಕುರಿತಾಗಿ ನಾವು ಕೇಳಿದ್ದೇವೆ. ಹೀಗೆ ಮಹಿಳೆಯೊಬ್ಬರು 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ್ದಾರೆ.
ಈ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ನಡೆದಿದೆ.ಮಗು ಆರೋಗ್ಯವಾಗಿದ್ದು, ಇದೀಗ ಎಲ್ಲರ ಆಕರ್ಷಣೆಗೆ ಕೇಂದ್ರವಾಗಿದೆ.
ಮಗುವಿನ ಬಲಗೈಗೆ 6, ಎಡಗೈಗೆ 7 ಮತ್ತು ಎರಡು ಕಾಲಿನಲ್ಲಿ ಕೂಡ ತಲಾ 6 ಬೆರಳುಗಳಿವೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಯಾವುದೇ ತೊಂದರೆಗಳು ಇಲ್ಲ. ತಾಯಿ ಗರ್ಭಿಣಿ ಆಗುವ ಸಂದರ್ಭದಲ್ಲಿ ಪಡೆಯುವ ಕ್ರೋಮೋಸೋಮ್‌ಗಳಲ್ಲಿ ಇಂತಹ ಗುಣಗಳಿದ್ದರೆ ಇಂತಹ ಮಗು ಹುಟ್ಟುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಮಕ್ಕಳ ಭಾಗ್ಯ ಕರುಣಿಸುವಂತೆ ಕುಂದರಗಿಯ ಭುವನೇಶ್ವರಿ ದೇವಿಗೆ ನನ್ನ ಹೆಂಡತಿ ಹರಹೆ ಹೊತ್ತಿದ್ದಳು. ಹರಕೆ ಹೊತ್ತ 4ನೇ ವಾರದಲ್ಲಿಯೇ ಗರ್ಭಿಣಿಯಾದಳು ಎಂದು ಮಗುವಿನ ತಂದೆ ಗುರಪ್ಪ ಸಂತಸ ಹಂಚಿಕೊಂಡಿದ್ದಾರೆ.