ಬಾಬುರಾವ್ ಚಿಂಚನಸೂರ ವಾಹನ ಅಪಘಾತ

Baburao Chinchanasur
Published on

ಕಲಬುರಗಿ: ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಕಾರು ಅಪಘಾತವಾಗಿದ್ದು, ಗಾಯಗಳಾಗಿವೆ.

ಯಾದಗಿರಿಯಿಂದ ಕಲಬುರಗಿಗೆ ಬರುವಾಗ ನಿನ್ನೆ ರಾತ್ರಿ 12:30 ರ ಸುಮಾರಿಗೆ ಘಟನೆ ನಡೆದಿದ್ದು, ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದೆ.

ಅಪಘಾತದಲ್ಲಿ ಚಿಂಚನಸೂರ್ ಕಾಲು ಮತ್ತು ಮುಖಕ್ಕೆ ಗಾಯವಾಗಿದೆ. ರಸ್ತೆಯ ಮದ್ಯ ಇರುವ ಗುಂಡಿಗೆ ಕಾರಿನ ಟೈರ್ ಬಿಳುತ್ತಿದ್ದ ಹಾಗೆ ಸ್ಕೀಡ್ ಆಗಿ ವಾಹನ ಬಿದ್ದಿದೆ.

ನಿದ್ದೆಯ ಮಂಪರಿನಲ್ಲಿ ವಾಹನ ಚಾಲಕ ಇದ್ದಿದ್ದಕ್ಕೆ ಘಟನೆ ನಡೆದಿದ್ದು, ಸ್ಥಳೀಯರು ಸಹಕಾರಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಮತ್ತು ಗನ್ ಮ್ಯಾನ್ ಗೆ ಸಣ್ಣ ಪುಟ್ಟ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net