ಬಾಬು ಜಗಜೀವನರಾಮ್ ಜಯಂತಿ ಆಚರಣೆ

05-04-25--krs1
Published on

 ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಮಾನತೆಯ ಹರಿಕಾರ ಬಾಬು ಜಗಜೀವನರಾಮ್ ಜಯಂತಿ ಆಚರಣೆ ಮಾಡಲಾಯಿತು.

ಗಣ್ಯರು ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ನಾಗೇಂದ್ರ ಮಾತನಾಡಿ, ದೇಶದ ಅಬಿವೃದ್ಧಿ ಹಾಗೂ ಬಡವರು, ದೀನ ದಲಿತರು, ದಮನಿತರು ಸೇರಿದಂತೆ ಸಾರ್ವಜನಿಕರ ಅಭಿವೃದ್ಧಿಗೆ ಬಾಬು ಜಗಜೀವನರಾಮ್ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಪಾಪಣ್ಣ, ಪಿ.ಡಿ.ಒ. ಬಸವರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ನಾಗೇಂದ್ರ ಕುಮಾರ್, ನರಸಿಂಹ, ಕಾರ್ಯದರ್ಶಿ ರಘು.ಜಿ, ಲೆಕ್ಕ ಸಹಾಯಕ ರವಿ, ಗ್ರಾಮದ ಮುಖಂಡ ನಾಗರಾಜು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net