

ಭರ್ಜರಿ ಮೆರವಣಿಗೆ ಹಸಿರು ಕ್ರಾಂತಿ ಹರಿಕಾರ ಸ್ಮರಣೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಾಜಿ ಪ್ರಧಾನಿಯಾಗಿರುವ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರ ೧೧೭ನೇ ಜಯಂತಿಯನ್ನು ನಗರದಲ್ಲಿ ಶುಕ್ರವಾರ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ಭರ್ಜರಿಯಾಗಿ ಆಚರಿಸಲಾಯಿತು. ಅಲ್ಲದೆ ಬಾಬೂಜಿ ಭಾವಚಿತ್ರದ ಮೆರವಣಿಗೆ ಜರ‍್ದಾರ್ ಆಗಿ ಜರುಗಿತು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ರಾಷ್ಟಿçÃಯ ಅಧ್ಯP್ಷÀರಾದ ನಿರಗುಡಿಯ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ಸನ್ನಿಧಾನದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ರಾಷ್ಟçಗೀತೆ ಮೊಳಗಿತು.
ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ ಜಿ.ರಾಮಕೃಷ್ಣ, ಸಮಿತಿ ವಕ್ತಾರ ವೈಜನಾಥ ಝಳಕಿ, ಬಾಬೂಜಿ ಅವರು ಕೈಗೊಂಡ ಹಸಿರು ಕ್ರಾಂತಿಯಿAದಾಗಿ ಆಹಾರ ಉತ್ಪಾದನೆ ಹೆಚ್ಚಿ ಜನರು ನೆಮ್ಮದಿಯಾಗಿ ಎರಡು ಹೊತ್ತು ಊಟ ಮಾಡುವಂತಾಗಿದೆ. ಅಂತಹ ವ್ಯಕ್ತಿಯ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು ಎಂಬುದು ಪೂಜ್ಯರ ಆಶಯವಾಗಿದೆ. ಎಲ್ಲರು ಶ್ರೇಷ್ಠ ವ್ಯಕ್ತಿಗಳ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಮುಖರಾದ ಶಹಾಜಿರಾವ ಪಾಟೀಲ್, ಗುರುಸಿದ್ದಪ್ಪ ಬೆನಕನಳ್ಳಿ, ಲಿಂಗರಾಜ ತಾರಫೈಲï, ಭೀಮರಾವ್ ಶಹಾಬಾದ್,ವಿಠ್ಠಲï ಹೊಡಲï, ಆಕಾಶ ಮನಗೂಳಿ,ಅಂಬಾರಾಯ ಚಲಗೇರಿ, ಅನಿಲ್ ಡೊಂಗರಗಾAವ, ರಾಮಪ್ರಸಾದ ಹೊಡಲï,ಭಾಗಪ್ಪ ಘತ್ತರಗಿ, ಸಂದೇಶ ಪವಾರ, ರಾಜಶೇಖರ ರೆಡ್ಡಿ, ಎಂ.ಎಸ್.ಪಾಟೀಲï ನರಿಬೋಳ, ಮಲ್ಲಿಕಾರ್ಜುನ ಸಾರವಾಡ,ದತ್ತು ಹಯ್ಯಾಳಕರ್, ರೇವಪ್ಪ ಮಮದಾಪುರ, ದಯಾನಂದ ಬೊಳಶೆಟ್ಟಿ, ಶಿವರಾಜ ವಾರದ ಸೇರಿದಂತೆ ಅನೇಕರಿದ್ದರು.
ಎಲ್ಲ ಅತಿಥಿಗಳಿಗೆ ಪೂಜ್ಯರು ಸತ್ಕರಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಬಾಬೂಜಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಬಳಿಕ ಹೊಳಿಗೆ, ಮಾವಿನ ಹಣ್ಣಿನ ರಸ,ಹುಗ್ಗಿ, ರೊಟ್ಟಿ, ಪುಂಡಿ ಪಲ್ಯದ ಊಟದ ವ್ಯವಸ್ಥೆ ಮಾಡಲಾಗಿತ್ತು.