ಬೆಂವಿವಿ: ಡಿ.16ರಂದು 2ನೇ ಸುತ್ತಿನ ಪಿಎಚ್.ಡಿ. ಸೀಟು ಹಂಚಿಕೆ

Bangalore University (1)
Published on

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯವು ಉಳಿಕೆಯಾಗಿರುವ ಪಿಎಚ್.ಡಿ.ಸೀಟುಗಳನ್ನು ಭರ್ತಿ ಮಾಡಲು ಡಿ.16ರಂದು 2ನೇ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದೆ.

ಅಂದು ಬೆಳಗ್ಗೆ 9.30ಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಆಯಾ ಸ್ನಾತಕೋತ್ತರ ವಿಭಾಗಗಳಲ್ಲಿ ಕೌನ್ಸೆಲಿಂಗ್ ನಡೆಸಲು ನಿರ್ಣಯಿಸಲಾಗಿದೆ. ಜ್ಯೇಷ್ಠತಾ ಪಟ್ಟಿಯಲ್ಲಿದ್ದು, ಆಯ್ಕೆಯಾಗದೆ ಇರುವ ಅರ್ಹ ವಿದ್ಯಾರ್ಥಿಗಳು ಮತ್ತು ಗೈರು ಹಾಜರಾಗಿರುವ ವಿದ್ಯಾರ್ಥಿಗಳು 2ನೇ ಸುತ್ತಿನ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.

ಇಂಗ್ಲಿಷ್, ಇತಿಹಾಸ, ಅರ್ಥಶಾಸ, ಸಮಾಜಶಾಸ, ರಾಜ್ಯಶಾಸ, ಪ್ರದರ್ಶನ ಕಲೆ, ಸಂವಹನ, ಸಮಾಜ ಕಾರ್ಯ, ಮಹಿಳಾ ಅಧ್ಯಯನ ಕೇಂದ್ರ, ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ, ಸಸ್ಯಶಾಸ, ರಸಾಯನಶಾಸ, ಎಂಸಿಎ, ಎಲೆಕ್ಟ್ರಾನಿಕ್ ಮೀಡಿಯಾ, ಭೂಗರ್ಭಶಾಸ, ಗಣಿತಶಾಸ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಭೌತಶಾಸ, ಪ್ರಾಣಿಶಾಸ, ಮೈಕ್ರೋಬಯಾಲಜಿ ಮತ್ತು ಬಯೋ ಟೆಕ್ನಾಲಜಿ, ಶಿಕ್ಷಣ, ಕಾನೂನು, ವಾಣಿಜ್ಯ ಮತ್ತು ನಿರ್ವಹಣಾ ಶಾಸದ ಕೋರ್ಸ್‌ಗಳ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net