ಹೇಯ ಕೃತ್ಯ ಮರುಕಳಿಸದಿರಲಿ, ಬಾಲಕಿ ಕುಟುಂಬದವರಿಗೆ ಸಂಗಮೇಶ ಬಬಲೇಶ್ವರ ಸಾಂತ್ವನ

IMG-20250417-WA0010.jpg
Published on

ಹುಬ್ಬಳ್ಳಿ: ನಗರದ ಹೆಣ್ಣುಮಗುವಿನ ಮೇಲೆ ಆದ ಅನ್ಯಾಯ, ಹೇಯ ಕೃತ್ಯ ಮತ್ತೆಂದೂ ಮರುಕಳಿಸದಿರಲಿ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದಲ್ಲಿ ಮೃತ ಬಾಲಕಿಯ ಪಾಲಕರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಅವರು ಸಾಂತ್ವನ ಹೇಳಿದರು.

ಮೃತ ಬಾಲಕಿಯ ಕುಟುಂಬದ ಕಣ್ಣೀರು ಕಂಡು ಭಾವುಕರಾದ ಅವರು, ಅವಳ ಅಕ್ಕನ ಶಿಕ್ಷಣಕ್ಕೆ ವೈಯಕ್ತಿಕವಾಗಿ ನೆರವು ನೀಡುವುದಾಗಿ ತಿಳಿಸಿದರು. ಸರ್ಕಾರದಿಂದ ದೊರಕಬಹುದಾದ ಎಲ್ಲ ನೆರವು ಸಿಗಲಿದೆ ಎಂದರು.

ಈ ಪ್ರಕರಣ ನಿರ್ವಹಣೆಯಲ್ಲಿ ಪೊಲೀಸ್ ಕಾರ್ಯ ಶ್ಲಾಘನೀಯವಾಗಿದೆ. ಹೇಯ ಕೃತ್ಯ ಎಸಗುವ ನೀಚರಿಗೆ ತಕ್ಕ ಶಾಸ್ತಿ ಆಗಬೇಕು ಎಂದರು.

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಅಕಾಡೆಮಿಯಿಂದ ಪರಸ್ಥಳಗಳಿಂದ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಹಾಗೂ ವಿಶೇಷವಾಗಿ ಮಕ್ಕಳಿಗೆ ಸುರಕ್ಷಿತ ಸ್ಥಳ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net