ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ

VMS 10-4
Published on

ವಿಜಯಪುರ: ಬಬಲೇಶ್ವರ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಕಸಾಪ ಮಾಜಿ ಅಧ್ಯಕ್ಷೆ, ಕವಯತ್ರಿ ಭಾರತಿ ಪಾಟೀಲ ಅವರಿಗೆ ಗುರುವಾರ ಅವರ ನಿವಾಸದಲ್ಲಿ ಜಿಲ್ಲಾ ಹಾಗೂ ಬಬಲೇಶ್ವರ ತಾಲೂಕು ಕಸಾಪ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.
ಭಾರತಿ ಅವರನ್ನು ಸನ್ಮಾನಿಸಿ, ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಹಿರಿಯ ಸಾಹಿತಿ ಶಂ.ಗು. ಬಿರಾದಾರ ಅವರ ಪುತ್ರಿ ಭಾರತಿ ಪಾಟೀಲ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಇಂಥ ಅಪರೂಪದ ಸಾಧಕಿಯನ್ನು ಸಮ್ಮೇಳನದ ಸರ್ವಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಹೆಮ್ಮೆಯಿದೆ ಎಂದರು.
ಬಬಲೇಶ್ವರ ಕಸಾಪ ತಾಲೂಕಾಧ್ಯಕ್ಷ ಪ್ರೊ ಮಹಾದೇವ ರೆಬಿನಾಳ, ಗೌರವ ಕಾರ್ಯದರ್ಶಿ ಪ್ರೊ.ಮಲ್ಲಿಕಾರ್ಜುನ ಅವಟಿ, ಡಾ.ಮುರುಗೇಶ ಸಂಗಮ, ಬಸನಗೌಡ ಬಿರಾದಾರ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಕುಂಬಾರ, ಎಸ್.ವೈ. ನಡುವಿನಕೇರಿ, ಎಸ್.ಡಿ. ಮಾದನಶೆಟ್ಟಿ, ರಂಗನಾಥ ಅಕ್ಕಲಕೋಟ, ವಿಶ್ರಾಂತ ಪ್ರಾಚಾರ್ಯ ಕೆ.ಎಸ್. ಪಾಟೀಲ, ಸಾನ್ವಿ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net