ಬಬಲೇಶ್ವರ ಸರ್ವಾಂಗೀಣ ಪ್ರಗತಿಗೆ ಬದ್ಧ; ಸುನೀಲಗೌಡ ಪಾಟೀಲ

KAKHANDAKI JINUGU KERE
ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ವಿಪ ಸದಸ್ಯ ಸುನೀಲಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹೇಶ ಗೌಡಪ್ಪಗೋಳ ಮತ್ತಿತರರಿದ್ದಾರೆ.
Published on

ವಿಜಯಪುರ: ಅಸಾಧ್ಯವಾದ ಕೆಲಸಗಳನ್ನು ಸಾಧ್ಯ ಮಾಡುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಅಂದಾಜು 160 ಲಕ್ಷ ರೂ. ವೆಚ್ಚದ ಹೊಸ ಜಿನುಗು ಕೆರೆ(ಸೈಟ್- 3) ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿದ ನಂತರ ಜಿಲ್ಲೆಗೆ ಮತ್ತಷ್ಟು ನೀರು ಹಂಚಿಕೆಯಾಗಲಿದ್ದು, ನೀರಾವರಿ ಕ್ಷೇತ್ರವೂ ವಿಸ್ತರಣೆಯಾಗಲಿದೆ. ನೀರಾವರಿ, ರಸ್ತೆ, ಗುಣಮಟ್ಟದ ವಿದ್ಯುತ್ ಪೂರೈಕೆ, ಶಿಕ್ಷಣ ಕ್ಷೇತ್ರದ ಸುಧಾರಣೆ ಮೂಲಕ ಎಂ. ಬಿ. ಪಾಟೀಲರು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನರ ಜೀವನಮಟ್ಟ ಮತ್ತಷ್ಟು ಸುಧಾರಿಸಲಿದ್ದು, ರೈತರು ಆರ್ಥಿಕವಾಗಿ ಹೆಚ್ಚು ಸದೃಢರಾಗಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹೇಶ ಗೌಡಪ್ಪಗೋಳ, ಅಲ್ಲಿಸಾಬ ಖಡಕೆ, ಪ್ರಕಾಶ ಹೂಗಾರಕರ, ಸಂಜು ಕಾಖಂಡಕಿ, ಸಂಕುಗೌಡ ಪಾಟೀಲ, ಚಂದ್ರಶೇಖರ ಸೀತಿಮನಿ, ಮಲ್ಲಿಕಾರ್ಜುನ ಪರಸನ್ನವರ, ಮಲ್ಲು ಹಿರೇಕುರಬರ, ಸುಖದೇವ ಯಕ್ಕುಂಡಿ, ಚಂದು ಸಿದರೆಡ್ಡಿ, ಗ್ರಾಪಂ ಕಾರ್ಯದರ್ಶಿ ರಫೀಕ ವಾಲಿಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net