

ವಿಜಯಪುರ : ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮನೆಯವರೆಲ್ಲರನ್ನು ಕಳೆದುಕೊಂಡು ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾದ ಬಾಲಕ ಪ್ರವಿಣತೇಜ್ನನ್ನು ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆರೋಗ್ಯ ವಿಚಾರಿಸಿದರು.
ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಸಂಗಮೇಶ ಬಬಲೇಶ್ವರ, ಪ್ರಭಾರ ಮಕ್ಕಳ ಜಿಲ್ಲಾ ರಣಾಧಿಕಾರಿ ಅನೀಲ ಹಳ್ಳಿ ಅವರಿಗೆ ಸೂಚನೆ ನೀಡಿ, ಬಾಲಕನ ಸಂಬಂಧಿಸಿದವರು ಬರುವವರೆಗೆ ನಮ್ಮ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳದಲ್ಲೆ ಇದ್ದು ಅಗತ್ಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಲ್ಲದೆ, ತಂದೆ, ತಾಯಿ ನಿಧನದ ವಿಷಯ ಮಗುವಿಗೆ ತಣಕ್ಕೆ ತಿಳಿಯದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೋಳಿ ಮತ್ತಿತರರಿದ್ದರು.