ಬಾಬಾ ಸಾಹೇಬ್ ಮೂರ್ತಿ ಅಪಮಾನಕ್ಕೆ ಖಂಡನೆ

Dvd manavi
ಅಂಬೇಡ್ಕರ್ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು. ಮುಖಂಡರಾದ ಹನುಮಂತಪ್ಪ ಮನ್ನಾಪುರ, ಲಿಂಗಪ್ಪ ಗೌಡೂರು, ವಿಶ್ವನಾಥ ಬಲ್ಲಿದವ್, ಮೌನೇಶ ಗಾಣಧಾಳ, ಬುರಪ್ಪ ಮರಡ್ಡಿ, ಪ್ರದೀಪ್, ಮೌನೇಶ ಇದ್ದರು.
Published on

ದೇವದುರ್ಗ: ಮೈಸೂರು ಜಿಲ್ಲೆಯ ವಾಜಮಂಡಲ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅಪಮಾನ ಮಾಡಿದ ಘಟನೆ ಖಂಡಿಸಿ ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುರುವಾರ ಪ್ರತಿಭಟನೆ ನಡೆಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆ ನಡೆದಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ರಾಜ್ಯದಲ್ಲಿ ಇಂಥ ಘಟನೆಗಳು ಪದೇಪದೆ ನಡೆಯುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹನುಮಂತಪ್ಪ ಮನ್ನಾಪುರ, ಲಿಂಗಪ್ಪ ಗೌಡೂರು, ವಿಶ್ವನಾಥ ಬಲ್ಲಿದವ್, ಮೌನೇಶ ಗಾಣದಾಳ, ಬುರಪ್ಪ ಮರಡ್ಡಿ, ಪ್ರದೀಪ್, ಮೌನೇಶ ಚಪ್ಪಳಕಿ, ಅಬ್ರಹಂ ಕಲಮಲದಿನ್ನಿ, ಯಲ್ಲನಗೌಡ, ಮಹಾಂತೇಶ ಭವಾನಿ, ಹೊನ್ನಪ್ಪ, ಲಕ್ಷ್ಮಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net