ಬಾಲಕಲ್ಯಾಣ ಕೇಂದ್ರದಲ್ಲಿ ಕುಮಾರಿಕಾ ಪೂಜೆ

IMG-20231019-WA0029.jpg
Published on

ಹುಬ್ಬಳ್ಳಿ: ಇಲ್ಲಿಯ ಸೇವಾಭಾರತಿ ಟ್ರಸ್ಟ್ ನ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ ಲಲಿತಾ ಪಂಚಮಿ ಪ್ರಯುಕ್ತ ಮಕ್ಕಳಿಂದ ಕುಂಕುಮಾರ್ಚನೆ ಹಾಗೂ ಕುಮಾರಿಕಾ ಪೂಜೆ ನೆರವೇರಿಸಲಾಯಿತು.

ಅತಿಥಿಯಾಗಿದ್ದ ಹೇಮಾ ದೇಸಾಯಿ ಅವರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು ಎನ್ನುವಂತೆ ಮಕ್ಕಳಿಗೆ ಈ ಸಂಸ್ಕಾರ ದೊರೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಮಹಿಳೆಯರು ದಾಂಡಿಯಾ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಬಾಲ ಕಲ್ಯಾಣ ಕೇಂದ್ರದ ಅಧ್ಯೆ ಕಮಲಾ ಜೋಶಿ, ವೀಣಾ ಮಳಿಯೆ, ನಂದಾ ಸವಡಿ ಉಪಸ್ಥಿತರಿದ್ದರು.

ರತ್ನಾ ಮಾತಾಜಿ ವಂದಿಸಿದರು. ಬಡಾವಣೆ ಮಕ್ಕಳು ಸೇರಿ ವಿವಿಧೆಡೆಯಿಂದ ಚಿಣ್ಣರು, ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net