'ಬಾ ಬಾರೋ ರಸಿಕ' ನಟಿ ಆಶಿತಾ ಈಗಲೂ ಸಖತ್​ ಬೋಲ್ಡ್​; ಫೋಟೋ ನೋಡಿದ್ರೆ ಕಳೆದು ಹೋಗುವುದು ಪಕ್ಕಾ...

ashita (1)
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಆಶಿತಾ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದರು. ಸಾಕಷ್ಟು ಹಿಟ್​ ಸಿನಿಮಾಗಳ ಜತೆಗೆ ಸ್ಟಾರ್​​ ನಟರ ಜತೆಗೆ ತೆರೆ ಹಂಚಿಕೊಂಡಿದ್ದ ನಟಿ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್​​ ಮೀಡಿಯಾದಲ್ಲಿ ಮಾತ್ರ ಸಖತ್​ ಆಕ್ಟಿವ್​ ಆಗಿರುತ್ತಾರೆ.  ಬನ್ನಿ ಎರಡು ಸಾವಿರ ದಶಕದಲ್ಲಿ ಪಡ್ಡೆಹುಡುಗ ನಿದ್ದೆ ಕೆಡಿಸಿದ್ದ ಈ ಚೆಲುವೆ ಈಗ ಹೇಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ....

ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದ ಆಶಿತಾ ಅವರಿಗೆ ತಮ್ಮ ಉತ್ತಮವಾದ ನಟನಾ ಶೈಲಿ ಮೂಲಕವಾಗಿ ನಟಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಸಾಕಷ್ಟು ಹಿಟ್​ ಸಿನಿಮಾಗಳ ಜತೆಗೆ ಸ್ಠಾರ್​ ಹೋರೋ ಜತೆಗೆ ತೆರೆ ಹಂಚಿಕೊಂಡಿದ್ದ ನಟಿ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಆಶಿತಾ, ಮುಂಬೈನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಎಂಬಿಎ ಪದವಿ ಪಡೆದಿರುವ ಇವರು ತಮ್ಮ ಮೊದಲ ಬ್ಯೂಟಿ ಕಂಟೆಸ್ಟ್ ಗೆದ್ದದ್ದು 16ನೇ ವಯಸ್ಸಿನಲ್ಲಿ. ನಂತರ ಮಿಸ್ ಬ್ಲಾಸಮ್ -1998, ಮಿಸ್ ಎಕ್ಷೋಟಿಕಾ- 1999 , ಮಿಸ್ ಮಿಲೇನಿಯಂ – 2000 ಸ್ಪರ್ಧೆಗಳಲ್ಲಿ ವಿಜೇತರಾದರು. `ಬಾ ಬಾ ಬಾರೋ ರಸಿಕ’ ಸೇರಿದಂತೆ ತವರಿನ ಸಿರಿ, ಆಕಾಶ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ ಸಿನಿಮಾರಂಗದಿಂದ ದೂರ ಇರುವ ಆಶಿತಾ ಮತ್ತೆ ಬಣ್ಣ ಹಚ್ಚುತ್ತಾರಾ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕೆಲವು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಕುರಿತಂತೆ ಮೀ ಟೂ  2018ರಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಸ್ಯಾಂಡಲ್​ವುಡ್​ ನಟಿ ಆಶಿತಾ ಚಿತ್ರರಂಗದಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು.

ಡಾ ಶಿವರಾಜ್‌ಕುಮಾರ್ ಅವರಿಗೆ 'ತವರಿನ ಸಿರಿ', ಪುನೀತ್ ರಾಜ್‌ಕುಮಾರ್ ಅವರಿಗೆ 'ಆಕಾಶ್' ಸಿನಿಮಾದಲ್ಲಿ ತಂಗಿಯಾಗಿ ನಟಿಸಿದ್ದ ನಟಿ ಆಶಿತಾ. ‘ಬಾ ಬಾರೋ ರಸಿಕ’ ಖ್ಯಾತಿಯ ಆಶಿತಾ, ‘ರೋಡ್ ರೊಮಿಯೋ’ ಸಿನಿಮಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇದಕ್ಕೆ ತಾವು ಚಿತ್ರರಂಗದಲ್ಲಿ ಅನುಭವಿಸಿರುವ ಕಹಿ ಘಟನೆಗಳೇ ಕಾರಣ ಎಂದು ಹೇಳಿಕೊಂಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net