

ಬಳ್ಳಾರಿ: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಕರೊನಾ ಪರೀಕ್ಷೆ ನಡೆಸುವ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರು ಸುಳಿವು ನೀಡಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲೇ ಜಮೀರ್ ಅವರ್ ಕ್ವಾರಂಟೈನ್ಗೆ ಹೋಗಲಿದ್ದಾರೆ. ಈಗಾಗಲೇ ಗೃಹ ಸಚಿವರು ಕೂಡ ಚರ್ಚೆ ಮಾಡಿ ಕ್ವಾರಂಟೈನ್ಗೆ ಕಳುಹಿಸಬೇಕೆಂದು ಹೇಳಿಕೆ ನೀಡಿದ್ದಾರೆ.
ಒಂದು ಸಾವು ಆದಾಗ ಜಮೀರ್ ಅವರು ಅಂತಿಮ ಸಂಸ್ಕಾರಕ್ಕೆ ಹೊಗಿದ್ದರು. ಹೀಗಾಗಿ ಜಮೀರ್ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಕ್ವಾರಂಟೈನ್ ಆದ ಮೇಲೆ ನಿಯಮದ ಪ್ರಕಾರ ಎಲ್ಲ ಟೆಸ್ಟ್ ಮಾಡಲಾಗುವುದು. ಏನೆಂಬುದು ಆನಂತರ ಗೊತ್ತಾಗಲಿದೆ ಎಂದರು.
ತನಿಖಾ ವರದಿ ಬಂದ ನಂತರ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಮಾತನಾಡಿ, ಜಮೀರ್ ಅವರನ್ನು ಕ್ವಾರಂಟೈನ್ ಮಾಡುವ ಬಗ್ಗೆ ಪಾದರಾಯನಪುರದ ಗಲಾಟೆ ಪ್ರಕರಣದ ತನಿಖಾ ವರದಿ ಬಂದ ನಂತರ ನಿರ್ಧಾರ ಮಾಡಲಾಗುವುದು. ಜನರು ಸಹಕಾರ ನೀಡಬೇಕು. ಇಲ್ಲದಿದ್ದರೆ ಕಠಿಣಕ್ರಮ ನಿಶ್ಚಿತ ಎಂದು ಎಚ್ಚರಿಸಿದರು. (ದಿಗ್ವಿಜಯ ನ್ಯೂಸ್)