ಸೂರ್ಯಗ್ರಹಣ ಹಿನ್ನೆಲೆ ಗ್ರಹಣ ದೋಷ ನಿವಾರಣೆಗೆ ಸಿಎಂ ಬಿಎಸ್​ವೈ ಕುಟುಂಬದಿಂದ ವಿಶೇಷ ಪೂಜೆ

CM Family
Published on

ತುಮಕೂರು: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕುಟುಂಬಸ್ಥರಿಂದ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಬಿಎಸ್​ವೈ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹಾಗೂ ಪುತ್ರಿ ಅರುಣಾದೇವಿ ಕುಟುಂಬಸ್ಥರಿಂದ ಗ್ರಹಣ ದೋಷ ನಿವಾರಣೆಗಾಗಿ ವಿಶೇಷ ಹೋಮ ಹವನ ನಡೆಸಲಾಯಿತು. ಸಿಎಂ ಕುಟುಂಬ ಶನಿವಾರ ಸಂಜೆಯಿಂದಲೂ ಪೂಜೆಯಲ್ಲಿ ಪಾಲ್ಗೊಂಡಿದ್ದು, ಗ್ರಹಣ ದಿನವಾದ ಇಂದು ಸಹ ಪೂಜಾ ಕೈಂಕರ್ಯ ಮುಂದುವರಿಯಲಿದೆ. ಇದನ್ನೂ ಓದಿ: ಇನ್ನಿಲ್ಲ ಪಿಂಚಣಿ ಚಿಂತೆ: ಹೊಸ ಹುದ್ದೆಗೇರಿದ ಎನ್​ಪಿಎಸ್ ಸಿಬ್ಬಂದಿಗೆ ಹಳೇ ಪೆನ್ಶನ್

ಯಡಿಯೂರಪ್ಪನವರ ಆಡಳಿತಕ್ಕೆ ಯಾವುದೇ ಗ್ರಹಣ ದೋಷ ಉಂಟಾಗದಂತೆ ಪೂಜೆ ನೆರವೇರಿಸಲಾಗುತ್ತಿದೆ. ಮುಂಜಾನೆ ಗ್ರಹಣ ಪೂಜೆ ಆರಂಭಿಸಲಾಗಿದ್ದು, ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ. ಯಡಿಯೂರಪ್ಪ ಹಾಗೂ ಕುಟುಂಬದವರ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಹೋಮ ಹವನಗಳು ನಡೆಯುತ್ತಿದೆ. ಖಾಸಗಿ ಕಾರ್ಯಕ್ರಮವಾದ್ದರಿಂದ ಕುಟುಂಬಸ್ಥರಿಗೆ ಮಾತ್ರ ದೇವಾಲಯದಲ್ಲಿ ಪ್ರವೇಶ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net