

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಹಾಗೂ ಭಾವಿ ಪರ್ಯಾಯ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿರುವ ವಿದ್ಯಾಪೀಠದಲ್ಲಿ ತಮ್ಮ 5ನೇ ಚಾತುಮಾರ್ಸ್ಯ ವೃತ ಕೈಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜುಲೈ 25ರಂದು ಭೇಟಿ ನೀಡಿ ಫಲ ಸಮರ್ಪಿಸಿದರು.
ಮಠದ ಪಾರುಪತ್ತೆಗಾರ ಶ್ರೀಶ ಭಟ್ ಕಡೆಕಾರು, ಜಯನಗರ ಶಾಸಕ ರಾಮಮೂರ್ತಿ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಬಸವನಗುಡಿ ಕಾರ್ಪೊರೇಟರ್ ವೆಂಕಟೇಶ ಉಪಸ್ಥಿತರಿದ್ದರು.