ಬಿ.ವೈ.ರಾಘವೇಂದ್ರ-ಸಂತೋಷ್ ಲಾಡ್ ಪರಸ್ಪರ ಗುಣಗಾನ

b.y.raghavendra-santhosh lad
Published on

ಶಿವಮೊಗ್ಗ: ಶಿವಾಜಿ ಜಯಂತಿಯು ಸಚಿವ ಸಂತೋಷ್ ಲಾಡ್ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನಡುವೆ ಪರಸ್ಪರ ಹೊಗಳಿಕೆಗೆ ಸಾಕ್ಷಿಯಾಯಿತು.

ಸಂತೋಷ್ ಲಾಡ್ ಎಲ್ಲ ಪಕ್ಷದವರ ಪ್ರೀತಿ ಗಳಿಸಿದ್ದಾರೆ. ಮುಖ್ಯಮಂತ್ರಿ ತೂಕದಲ್ಲಿ ಇದ್ದಾರೆ. ಅವರು ಸಿಎಂ ಆಗಬೇಕೆನ್ನುವುದು ನನ್ನ ಆಸೆ ಕೂಡ ಎಂದು ರಾಘವೇಂದ್ರ ಹಾರೈಸಿದರು. ಬಳಿಕ ಮಾತನಾಡಿದ ಸಂತೋಷ್ ಲಾಡ್, ರಾಘವೇಂದ್ರ ಅವರು ಬಂಗಾರದ ಮನುಷ್ಯ. ಅಭಿವೃದ್ಧಿಯ ಹರಿಕಾರ, ಗುಣಕ್ಕೆ ಯಾವಾಗಲೂ ಮತ್ಸರ ಇರುವುದಿಲ್ಲ ಎಂದು ಗುಣಗಾನ ಮಾಡಿದರು.

ಎಂಎಲ್‌ಸಿ ಮುಳೆ ಮಾತನಾಡಿ, ಸಂತೋಷ್ ಲಾಡ್ ಅವರು ಸಿಎಂ ಆಗುವ ಅರ್ಹತೆ ಹೊಂದಿದ್ದು ನಮ್ಮ ಸಮಾಜವನ್ನು ಪ್ರತಿನಿಧಿಸುವ ಏಕೈಕ ನಾಯಕರಾಗಿದ್ದಾರೆ ಎಂದರು. ಪ್ರಸ್ತಾವಿಕ ಮಾತನಾಡಿದ ಸಮಾಜದ ಮುಖಂಡ ದೇವರಾಜ್ ಸಿಂಧ್ಯೆ, ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸಚಿವ ಮತ್ತು ಸಂತೋಷ್ ಲಾಡ್ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net