ತಿ.ನರಸೀಪುರ ಪುರಸಭೆಗೆ ಬಿ.ವಸಂತಾ ಅಧ್ಯಕ್ಷೆ

oplus_4194304
oplus_4194304
Published on

ತಿ.ನರಸೀಪುರ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಬಿ.ವಸಂತಾ ಶ್ರೀಕಂಠ, ಉಪಾಧ್ಯಕ್ಷೆಯಾಗಿ ಎಂ.ರಾಜೇಶ್ವರಿ ರಾಘವೇಂದ್ರ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಹಿಂದುಳಿದ ವರ್ಗಗಳ ಎ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 12ನೇ ವಾರ್ಡಿನ ಸದಸ್ಯೆ ಬಿ.ವಸಂತಾ ಶ್ರೀಕಂಠ ಹಾಗೂ ಪ.ಪಂಗಡ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಉಪಾಧ್ಯಕ್ಷ 17ನೇ ವಾರ್ಡಿನ ಸದಸ್ಯೆ ಎಂ.ರಾಜೇಶ್ವರಿ ರಾಘವೇಂದ್ರ ಅವರಿಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್ ಪ್ರಾಬಲ್ಯವಿರುವ ಪಟ್ಟಣ ಪುರಸಭೆಯಲ್ಲಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಪಕ್ಷೇತರ ಸದಸ್ಯೆಯ ಕೈ ವಶವಾಗಿದ್ದು, ಉಪಾಧ್ಯಕ್ಷೆ ಸ್ಥಾನ ಕಾಂಗ್ರೆಸ್ ಸದಸ್ಯೆಯ ಪಾಲಾಯಿತು.


ಪುರಸಭೆಯ 23 ಸದಸ್ಯರಲ್ಲಿ 20 ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಎಸ್. ಮದನ್‌ರಾಜ್, ರೂಪ ಕರಿಯಪ್ಪ ಹಾಗೂ ಮಾದೇವಿ ಗೈರು ಹಾಜರಾಗಿದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಕಾರ್ಯನಿರ್ವಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


ನೂತನ ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹಾಗೂ ಪುರಸಭೆ ಸದಸ್ಯರೆಲ್ಲರೂ ನನ್ನ ಮೇಲೆ ನಂಬಿಕೆಯಿಟ್ಟು, ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಪಾಡಲು ಆದ್ಯತೆ ನೀಡುತ್ತೇನೆ ಜತೆಗೆ ಅಭಿವೃದ್ಧಿಗೂ ಶ್ರಮಿಸುತ್ತೇನೆ ಎಂದು ತಿಳಿಸಿದರು.


ಉಪಾಧ್ಯಕ್ಷೆ ಎಂ.ರಾಜೇಶ್ವರಿ ರಾಘವೇಂದ್ರ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಟಿ.ಎಂ.ನಂಜುಂಡಸ್ವಾಮಿ, ಎನ್. ಸೋಮಣ್ಣ, ಸದಸ್ಯರಾದ ಎಂ.ಸಿದ್ದು, ಪ್ರೇಮಾ, ಎಲ್.ಮಂಜುನಾಥ್, ಅಹಮ್ಮದ್ ಸಯೀದ್, ಬಿ.ಬೇಬಿ, ಸಿ.ಪ್ರಕಾಶ್ , ಜಿ.ರೂಪಶ್ರೀ, ಆರ್.ನಾಗರಾಜು, ಮಹದೇವಮ್ಮ, ಆರ್.ಅರ್ಜುನ್, ಪಿ.ಶೋಭಾರಾಣಿ, ಆರ್.ತೇಜಸ್ವಿನಿ, ವಿ.ಮೋಹನ್, ಬಾದಾಮಿ ಮಂಜು, ನಾಗರತ್ನ ಮಾದೇಶ, ಕೆ.ಕಿರಣ್, ಕುರುಬರ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ, ನಿರ್ದೇಶಕ ಎಚ್.ಸಿ. ಅರುಣ್ ಕುಮಾರ್, ತಾ.ಪಂ. ಮಾಜಿ ಸದಸ್ಯರಾದ ಎಂ.ರಮೇಶ್, ಬಿ.ಮರಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕುಪ್ಯ ಭಾಗ್ಯಮ್ಮ, ಮುಖಂಡರಾದ ತಿರುಮಕೂಡಲು ಪುಟ್ಟು, ಆರ್.ಮಹದೇವು, ಚೇತನ್, ಕೆ.ಗಣೇಶ್, ಎಂ.ಮಿಥುನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net