VIDEO| ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾರ ಅದ್ಧೂರಿ ಮದುವೆ ಸಂಭ್ರಮ: ಅರಮನೆ ಮೈದಾನದಲ್ಲಿ ಕುಟುಂಬದ ಸಡಗರ

Sriramulu
Published on

ಬೆಂಗಳೂರು: ಒಂದೆಡೆ ರಾಜ್ಯ ಬಜೆಟ್​ಗೆ ಕ್ಷಣಗಣನೆ ಆರಂಭವಾಗಿದ್ದರೆ, ಇನ್ನೊಂದೆಡೆ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾಳ ಅದ್ಧೂರಿ ಮದುವೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ರಕ್ಷಿತಾ ಅವರು ಲಲಿತ್ ಸಂಜೀವ್ ರೆಡ್ಡಿಯನ್ನು ವರಿಸುತ್ತಿದ್ದಾರೆ.

ಸಿಎಂ ಬಿಎಸ್​ವೈ, ಸಚಿವರು ಹಾಗೂ ಗಣ್ಯರು ಸೇರಿದಂತೆ ಅನೇಕರು ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಮದುವೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಹೀಗಾಗಿ ವಿವಿಧ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಪ್ಯಾಲೆಸ್ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.

ಮದುವೆಗಾಗಿಯೇ ಪ್ಯಾಲೇಸ್ ಮೈದಾನದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಹಾಗೂ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲಿ ಸೆಟ್ ಹಾಕಲಾಗಿದೆ. ಸುಮಾರು 4 ಎಕರೆ ಜಾಗದಲ್ಲಿ ಮದುವೆ ಕಾರ್ಯ ಹಾಗೂ 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ನಿರ್ಮಾಣ ಮಾಡಲಾಗಿದೆ.

ಮೂಹೂರ್ತ ಮಂಟಪದಲ್ಲಿ 4 ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. 7 ಸಾವಿರ ಮಂದಿ ಒಂದೇ ಬಾರಿ ಊಟ ಮಾಡುವಂತಹ ವ್ಯವಸ್ಥೆ ಇದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ಸಮಯದಲ್ಲಿ ಮೇಕಪ್ ಮಾಡಿದವರೇ ರಕ್ಷಿತಾಗೆ ಮೇಕಪ್ ಮಾಡಿದ್ದಾರೆ. ‍ಸಾನಿಯಾ ಸರ್ದಾರಿಯಾ ವಸ್ತ್ರ ವಿನ್ಯಾಸ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net