ಬಿಎಸ್‌ಸಿ ಟೆಕ್ಸ್‌ಟೈಲ್ ಮಾಲ್‌ನಲ್ಲಿ ಚೆಸ್ ದಿನಾಚರಣೆ

21Jaggu7
ಬೆಳಗಾವಿ ಟಿಳಕವಾಡಿಯ ಬಿ.ಎಸ್.ಸಿ. ದಿ ಟೆಕ್ಸ್ ಟೈಲ್ ಮಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Published on

ಬೆಳಗಾವಿ: ಟಿಳಕವಾಡಿಯ ಬಿ.ಎಸ್.ಸಿ. ದಿ ಟೆಕ್ಸ್‌ಟೈಲ್ ಮಾಲ್ ಹಾಗೂ ಬೆಳಗಾವಿ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಶುಕ್ರವಾರ ವಿಶ್ವ ಚೆಸ್ ದಿನ ಆಚರಿಸಲಾಯಿತು. ಬಿ.ಎಸ್.ಸಿ. ದಿ ಟೆಕ್ಸ್‌ಟೈಲ್ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಚೆಸ್ ಪಂದ್ಯಾವಳಿಯಲ್ಲಿ 30 ಶಾಲೆಗಳ 75ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಬೆಳಗಾವಿ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್‌ನ ನಿರಂಜನ ನವಲಗುಂದ (ಏಷಿಯನ್ ಮೆಡಲಿಸ್ಟ್), ಗಿರೀಶ್ ಬಚಿಕರ್ (ಸೆಕ್ರೆಟರಿ), ಚಿದಂಬರ ನವಲಗುಂದ, ಆಕಾಶ ಮಡಿವಾಳರ, ಬಿ.ಎಸ್.ಸಿ. ಟೆಕ್ಸ್‌ಟೈಲ್ ಮಾಲ್‌ನ ಸಿಬ್ಬಂದಿ ಮತ್ತು ಗ್ರಾಹಕರು, ಪಾಲಕರು, ಶಿಕ್ಷಕರು ಭಾಗವಹಿಸಿದ್ದರು. ಚೆಸ್ ಪಂದ್ಯದ ವಿಜೇತರಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.

ಬಿಎಸ್‌ಸಿ ಮಳಿಗೆ ವ್ಯವಸ್ಥಾಪಕ ಅಮ್ಜಾದ್ ಜಮಾದಾರ, ಮಾರುಕಟ್ಟೆ ವ್ಯವಸ್ಥಾಪಕ ಈರಣ್ಣ ಶಿವಶೆಟ್ಟಿ, ಅಸಿಸ್ಟಂಟ್ ಮ್ಯಾನೇಜರ್ ಸತ್ಯವಿಜಯ್ ವೇರ್ಣೇಕರ, ಸಂದೀಪ ನಾಯಕ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net