ಬ.ಸಾಲವಾಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಸ್ತೂರಿಬಾಯಿ ಅವಿರೋಧ ಆಯ್ಕೆ

B.Salawadagi, Kasthuribai Bidarakundi, Talikote, Gram Panchayat, Election, Gundakanala,
ತಾಳಿಕೋಟೆ ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಸ್ತೂರಿಬಾಯಿ ಬಿದರಕುಂದಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಂಬಲಿತ ಸದಸ್ಯರು, ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗೌಡಪ್ಪಗೌಡ ರಾರಡ್ಡಿ, ಗುರುನಾಥ ಬಿಳೇಭಾವಿ, ವಿಶ್ವನಾಥ ಜಹಾಗೀರದಾರ, ಬಸಮ್ಮ ಗುಜ್ಜಲ, ಮಲ್ಲನಗೌಡ ಹೊಸಮನಿ, ಅನೀತಾ ಪಾಟೀಲ ಇತರರಿದ್ದರು.
Published on

ತಾಳಿಕೋಟೆ: ತಾಲೂಕಿನ ಬ.ಸಾಲವಾಡಗಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಸ್ತೂರಿಬಾಯಿ ದೇ. ಬಿದರಕುಂದಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾಪಂ ಸದಸ್ಯರಾದ ಗೌಡಪ್ಪಗೌಡ ರಾರಡ್ಡಿ, ಗುರುನಾಥ ಬಿಳೇಭಾವಿ, ವಿಶ್ವನಾಥ ಜಹಾಗೀರದಾರ, ಬಸಮ್ಮ ಗುಜ್ಜಲ, ಮಲ್ಲನಗೌಡ ಹೊಸಮನಿ, ಅನೀತಾ ಪಾಟೀಲ, ಕಾಶಪ್ಪ ಚಲವಾದಿ, ಮಲ್ಲಣ್ಣ ಕೆಸಾಪೂರ, ಭೋರಮ್ಮ ಪೂಜಾರಿ, ಮಲಕಾಜಪ್ಪ ತಿಂಥಣಿ, ಸಂಗೀತಾ ಬರದೇನಾಳ, ಕಾಶಿಬಾಯಿ ಹಳ್ಳಿ, ಲಕ್ಷ್ಮೀಬಾಯಿ ಕೆಂಚಾಗೋಳ, ಯಮನಪ್ಪ ಹೊರಗಿನಮನಿ ಪಾಲ್ಗೊಂಡಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸರ್ಕಾರಿ ಸಿಬ್ಬಂದಿ ಗ್ರಾಪಂ ಪಿಡಿಒ ಸಿ.ಎಸ್.ಮಠ, ಕಾರ್ಯದರ್ಶಿ ಎಸ್.ಜಿ.ಅಲ್ಲಾಪೂರ ಕಾರ್ಯನಿರ್ವಹಿಸಿದರು. ಮುಖಂಡರು, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮುಖಂಡರಾದ ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಗುರುಗೌಡ ಗುರಡ್ಡಿ, ರಾಜುಗೌಡ ಯಾಳಗಿ, ಕುಮಾರ ಅನಂತರಡ್ಡಿ, ಸಾಹೇಬಗೌಡ ರಾರಡ್ಡಿ, ಮಲ್ಲನಗೌಡ ಯಾಳಗಿ, ಮಲ್ಲನಗೌಡ ಕಾರಲಕುಂಟಿ, ನಿಂಗಣ್ಣ ಕೆಸರಟ್ಟಿ, ಶಿವು ಕಡಕಲ್ಲ, ನಿಂಗಣ್ಣ ಕುಳಗೇರಿ, ಒಳಗೊಂಡು ಬಿಳೇಭಾವಿ, ಬ.ಸಾಲವಾಡಗಿ, ಗುಂಡಕನಾಳ ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net