ಬಿ.ಪ್ಯಾಕ್​​​ನಿಂದ ನಾಗರಿಕ ನಾಯಕತ್ವ ತರಬೇತಿಗೆ ಅರ್ಜಿ ಆಹ್ವಾನ

Vijayavani's top news of the day
Published on

ಬೆಂಗಳೂರು: ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ ಪ್ಯಾಕ್) ವತಿಯಿಂದ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗಾಗಿ ‘ಬಿ.ಪ್ಯಾಕ್ ನಾಗರಿಕ ನಾಯಕತ್ವ ತರಬೇತಿ’ (ಬಿ ಕ್ಲಿಪ್) ಕಾರ್ಯಕ್ರಮದ 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ.

ರಾಜಕೀಯ, ನಗರ ಆಡಳಿತ, ನೀತಿ ನಿರೂಪಣೆ, ನಾಯಕತ್ವ, ಚುನಾವಣಾ ಕಾರ್ಯತಂತ್ರ, ಮಾಧ್ಯಮ ನಿರ್ವಹಣೆ ಸೇರಿ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬೇಕಾದ ಎಲ್ಲ ರೀತಿಯ ಅರ್ಹತೆಯನ್ನು ಈ ತರಬೇತಿಯಲ್ಲಿ ನೀಡಲಾಗುತ್ತದೆ.

ಬಿ ಕ್ಲಿಪ್ ಕಾರ್ಯಕ್ರಮದ ಮುಖ್ಯಸ್ಥ ಎಚ್.ಎಸ್.ರಾಘವೇಂದ್ರ ಪೂಜಾರಿ ಮಾತನಾಡಿ, ಬೆಂಗಳೂರಿನ ತಳಮಟ್ಟದಲ್ಲಿ ನಾಗರಿಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಹಾಗೂ ದಕ್ಷ ಆಡಳಿತದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ನಾಯಕರನ್ನು ರೂಪಿಸುವುದೇ ತರಬೇತಿಯ ಮೂಲ ಉದ್ದೇಶ. ಕಳೆದ ಒಂಬತ್ತು ವರ್ಷದಲ್ಲಿ 400ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲಾಗಿದ್ದು, 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಏ.10ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ ಎಂದಿದ್ದಾರೆ.

ಆಸಕ್ತ ನಾಗರಿಕರು ಅರ್ಜಿ ಸಲ್ಲಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ: 63648 56147, 080-41521797 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net